

ಮುಳಬಾಗಿಲು:
ಉದ್ಯಾನವನ ನಿಮಾರ್ಣಕ್ಕಾಗಿ ಮಣ್ಣು ತುಂಬಿ, ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಅನೇಕ ಕಾಮಗಾರಿಗಳನ್ನು ಕೈಗೊಂಡು ಎರಡು ದಶಕಗಳೇ ಕಳೆದಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಈವರೆಗೂ ಸಾರ್ವಜನಿಕ ಬಳಕೆಗೆ ದೊರೆಯದೆ ಪುಂಡು-ಪೋಕರಿಗಳ ಅಡ್ಡೆಯಾಗಿದೆ ನಗರದ ಸೊ ವಬ.ನ ಮೇಶ್ವರಪಾಳ್ಯ ಕೆರೆ ಅಂಗಳದಲ್ಲಿರುವ ಪಾರ್ಕ್.
ಸಸಿ ನೆಟ್ಟರಷ್ಟೇ, ನಿರ್ವಹಣೆ ಇಲ್ಲ! ಅರಣ್ಯ ಇಲಾಖೆಯಿಂದ 2022&25ನೇ ಸಾಲಿನಲ್ಲಿ ಉದ್ಯಾನವನದ ಆವರಣದಲ್ಲಿ ಸಸಿಗಳನ್ನು ನೆಡಲಾಗಿದೆ. ಆದರೆ ನೆಟ್ಟ ಸಸಿಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳದ್ದರಿಂದಹಲವು ಭಾಗಗಳಲ್ಲಿಗಿಡಗಂಟಿಗಳೇ ಆವರಿಸಿವೆ.
ಶೌಚಗೃಹಕ್ಕೆ ಬೀಗಮುದ್ರೆ
ನಗರಸಭೆಯಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಕ್ಕೂ ಹಲವು ವರ್ಷಗಳಿಂದ ಬೀಗ ಬಿದ್ದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಸೌಲಭ್ಯವೇ ಬಳಕೆಗೆ ಬಾರದಿರುವುದು ನಗರಸಭೆಯ ನಿರ್ವಹಣಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.
ಸಂಜೆಯಾಗುತ್ತಿದ್ದಂತೆ ರ್ನಿಜನ ಪ್ರದೇಶ
ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಪ್ರದೇಶ ಸಂಜೆ ವೇಳೆಗೆ ರ್ನಿಜನವಾಗುತ್ತದೆ. ಇದೇ ಕಾರಣದಿಂದ ಕೆಲವರು ಇಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ಪಡೆಯುತ್ತಿದ್ದಾರೆ ಎಂಬ ಆರೋಪ ಸ್ಥಳಿಯರಿಂದ ಕೇಳಿಬಂದಿದೆ. ಮಹಿಳೆಯರು, ಮಕ್ಕಳು ಹಾಗೂ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಉದ್ಯಾನವನದತ್ತ ತೆರಳಲು ಹಿಂದೇಟು ಹಾಕುವಂತಾಗಿದೆ. ಪ್ಲಾಸ್ಟಿಕ್ ಬಾಟಲಿ, ತಿಂಡಿ ಪೊಟ್ಟಣ ಹಾಗೂ ವಿವಿಧ ರೀತಿಯ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ.