

ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್‌ಪೇಟೆ,ಬೆಂಗಳೂರು: ಲೌಕಿಕಬದುಕಿನಲ್ಲಿ ಸಿಲುಕಿ ನೆಮ್ಮದಿಕಳೆದುಕೊಳ್ಳುವವರಿಗೆ ಆಧ್ಯಾತ್ಮಿಕಮಾರ್ಗದ ಮೂಲಕ ಮಾನಸಿಕ ನೆಮ್ಮದಿಯನ್ನುದೊರಕಿಸಿ ಕೊಡಲು ಅಸಂಖ್ಯಾತ ಸಂತರು,ಮಹಾಂತರು,ಆಚಾರ್ಯರು ತಮ್ಮದೇತತ್ವ-ಸಿದ್ಧಾಂತಗಳನ್ನುಈ ಜಗತ್ತಿಗೆ ಬೋದಿಸಿದ್ದಾರೆ.ಅಂತಹವರಲ್ಲಿಶ್ರೀಜಗದ್ಗುರು ರೇಣುಕಾಚಾರ್ಯರುಅಗ್ರಗಣ್ಯರು.
ಸಿದ್ಧಾಂತಭೇದದದೃಷ್ಟಿಯಲ್ಲಿ ಮಹಾತ್ಮರ ನಡೆಭಿನ್ನವಾಗಿ ಕಂಡರೂ,ಸಾಮಾಜಿಕ ಚಿಂತನೆಮತ್ತು ಪರಿವರ್ತನೆಯ ದೃಷ್ಟಿಯಿಂದಎಲ್ಲ ಮಹಾತ್ಮರ ಕೊಡುಗೆಯೂ ಗಮನಾರ್ಹ.ಆಧ್ಯಾತ್ಮಿಕ,ಧಾರ್ಮಿಕ ಚಿಂತನೆಗಳುಸಾಮಾಜಿಕ ಪರಿವರ್ತನೆಗೆ ಕಾರಣವಾದರೆ;ಅಂತಹ ಸಂದೇಶಗಳುಲೋಕಮಾನ್ಯವೆನಿಸುತ್ತವೆ.ಶ್ರೀಜಗದ್ಗುರುರೇಣುಕಾಚಾರ್ಯರು ಭೋದಿಸಿದಶಿವಾದ್ವೆತ ಸಿದ್ಧಾಂತವು ಯುಗಯುಗಗಳ ಹಿಂದೆಯೇ ಸಾಮಾಜಿಕ ಸಮಾನತೆಗೆಒತ್ತು ನೀಡಿತ್ತು.ಪರಶಿವನ ಪಂಚಮುಖಗಳಿಂದಆವೀರ್ಭವಿಸಿದ ಶ್ರೀಜಗದ್ಗುರುರೇಣುಕಾದಿ ಪಂಚಾಚಾರ್ಯರು ಭೂತಲದಲ್ಲಿಶಿವಾದ್ವೆತ ಸಿದ್ಧಾಂತವನ್ನುಬೋದಿಸಲು ಆಯ್ಕೆ ಮಾಡಿಕೊಂಡ ಪಂಚಮುನಿಗಳು ಜನ್ಮಜಾತಿಯಿಂದಕೆಳವರ್ಗದವರು.ಆದರೆ ಉಪದೇಶಕ್ಕೆಜಾತಿಗಿಂತ ಯೋಗ್ಯತೆ ಮುಖ್ಯ ಎಂಬಹಿನ್ನೆಲೆಯಲ್ಲಿ ಅವರಲ್ಲಿರುವಉತ್ಕಟ ಇಚ್ಛೆಗನುಸಾರವಾಗಿಪಂಚಸೂತ್ರದ ಮೂಲಕ ಶಿವಜೀವೈಕ್ಯರಹಸ್ಯವನ್ನು ಉಪದೇಶ ಮಾಡಿದ್ದಾರೆ.ಅಂತೆಯೇ ಜಗದ್ಗುರುರೇಣುಕಾಚಾರ್ಯರು ಕಬ್ಬಿಗರ ಕುಲದಅಗಸ್ತ್ಯ ಮುನಿಗೆ ಬೋದಿಸಿದಪಡ್ವಿಡಿ ಸೂತ್ರದ ವಿಸ್ತೃತ ರೂಪವೇಶ್ರೀ ಸಿದ್ಧಾಂತ ಶಿಖಾಮಣಿ.
ಗರ್ಭಸ್ಥೋಜಾಯಮಾನೋ ವಾ ಜಾತೋ ವಾ ಬ್ರಾಹ್ಮಣೋಥವಾ
ಅಂತ್ಯಜೋವಾಪಿ ಮುಚ್ಯತೇ ಪ್ರಸಾದೇ ಸತಿಶಾಂಕರೇ ॥
ಗರ್ಭದಲ್ಲಿರುವಶಿಶುವಾಗಿರಲಿ,ಹುಟ್ಟಿದ ಮಗುವಾಗಲಿ,ಯಾವುದೇ ಮನುಷ್ಯನಾಗಲಿ,ಅವನು ಬ್ರಾಹ್ಮಣನಾಗಿರಲಿ,ಅಂತ್ಯಜನಾಗಿರಲಿಪರಶಿವನ ಪ್ರಸಾದದಿಂದ ಇವರೆಲ್ಲಮುಕ್ತಾತ್ಮರಾಗುತ್ತಾರೆ ಎನ್ನುವಮೂಲಕ ಜಾತಿಗಿಂತ ಸಂಸ್ಕಾರ ಮುಖ್ಯ,ಯೋಗ್ಯತೆ ಇರುವಪ್ರತಿಯೊಬ್ಬ ವ್ಯಕ್ತಿಯು ಆಧ್ಯಾತ್ಮಸಾಧನೆಯ ಮೂಲಕ ಪರಮ ಪದವಿಯನ್ನುಪಡೆಯಲು ಸಾಧ್ಯ ಎಂಬ ಸಂದೇಶವನ್ನುಸಾರಿದವರು ಶ್ರೀಜಗದ್ಗುರುರೇಣುಕಾಚಾರ್ಯರು.ಪಾಲ್ಗುಣ ಶುದ್ಧತ್ರಯೋದಶಿಯಂದು ತೆಲಂಗಾಣದಕೊಲ್ಲಿಪಾಕಿ ಮಹಾಕ್ಷೇತ್ರದಸ್ವಯಂಭು ಸೋಮೇಶ್ವರ ಲಿಂಗದಿಂದಾವಿರ್ಭವಿಸಿದಶ್ರೀರೇಣುಕಾಚಾರ್ಯರ ಜಯಂತಿಮಹೋತ್ಸವವನ್ನು ನಾಡಿನಾದ್ಯಂತಮಾ.1ರಂದುಆಚರಿಸಲಾಗುತ್ತದೆ.ವಿಶೇಷವಾಗಿಭದ್ರಾನದಿ ತೀರದ ಮಲಯಾಚಲತಪೋಭೂಮಿಯಲ್ಲಿರುವ ಶ್ರೀರಂಭಾಪುರಿವೀರಸಿಂಹಾಸನ ಮಹಾಪೀಠದಲ್ಲಿ ಶ್ರೀಜಗದ್ಗುರು ಡಾ.ವೀರಸೋಮೇಶ್ವರಶಿವಾಚಾರ್ಯ ಭಗವತ್ಪಾದರಸಾನ್ನಿಧ್ಯದಲ್ಲಿ ಫೆ.27ರಿಂದ ಮಾ.3ರವರೆಗೆ 5ದಿನಗಳ ಕಾಲಜಾತ್ರಾ ಮಹೋತ್ಸವ ವಿಜೃಂಭಣೆಯಿಂದನಡೆಯಲಿದೆ.
51 ಅಡಿಶಿಲಾಮೂರ್ತಿಯ ಶಿಲಾನ್ಯಾಸ:
ಮಹಾತ್ಮರುಜಗತ್ತಿಗೆ ನೀಡಿದ ಸಂದೇಶಗಳಸಾರವನ್ನು ಶಾಶ್ವತವಾಗಿರಿಸುವಉದ್ದೇಶದಿಂದ ಪ್ರತಿಮೆಗಳನ್ನುಸ್ಥಾಪಿಸಲಾಗುತ್ತದೆ.ಅಂತೆಯೇಬಾಳೆಹೊನ್ನೂರಿನ ಶ್ರೀರಂಭಾಪುರಿಪೀಠದ ಪರಿಸರದಲ್ಲಿ 51ಅಡಿ ಬೃಹತ್ ಶಿಲಾಮೂರ್ತಿ ಪ್ರತಿಷ್ಠಾಪಿಸುವಮಹತ್ವಾಕಾಂಕ್ಷಿ ಯೋಜನೆಪ್ರಗತಿಯಲ್ಲಿದೆ.ಈಗಾಗಲೇ ಬೃಹತ್ಕಲ್ಲು ಬಂಡೆಗಳು ಪೀಠದ ಅಂಗಳವನ್ನುತಲುಪಿದ್ದು,ಕಾಮಗಾರಿ ಭರದಿಂದಸಾಗಿದೆ.ಶ್ರೀಜಗದ್ಗುರುರೇಣುಕಾಚಾರ್ಯರ ತತ್ವ-ಸಂದೇಶಗಳನ್ನುಸಾರುವ ಉದ್ದೇಶದಿಂದ ಥೀಮ್ ಪಾರ್ಕ್ನಿರ್ಮಾಣಗೊಳ್ಳಲಿದ್ದು ಶ್ರೀಜಗದ್ಗುರುರೇಣುಕಾಚಾರ್ಯ ಜಯಂತಿಯಂದು ಇದರಶಿಲಾನ್ಯಾಸವನ್ನು ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್ನೆರವೇರಿಸಲಿದ್ದಾರೆ.ಲಕ್ಷಾಂತರ ಭಕ್ತರಶ್ರದ್ಧಾಕೇಂದ್ರವಾಗಿರುವಬಾಳೆಹೊನ್ನೂರಿನ ಶ್ರೀರಂಭಾಪುರಿಪೀಠದ ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆಮತ್ತಷ್ಟು ಉತ್ತೇಜನ ದೊರೆಯಲಿದೆ.
ಶ್ರೀಜಗದ್ಗುರುರೇಣುಕಾಚಾರ್ಯ ಪ್ರಶಸ್ತಿ:
ಶ್ರೀರಂಭಾಪುರಿಪೀಠದಿಂದ ಪ್ರತಿವರ್ಷ ಓರ್ವ ಉನ್ನತಸಾಧಕರಿಗೆ ಶ್ರೀ ಜಗದ್ಗುರುರೇಣುಕಾಚಾರ್ಯ ಪ್ರಶಸ್ತಿಯನ್ನುನೀಡಿ ಗೌರವಿಸಲಾಗುತ್ತದೆ.1 ಲಕ್ಷ ನಗದುಮತ್ತು ಪುರಸ್ಕಾರ ಒಳಗೊಂಡಿರುವಪ್ರಶಸ್ತಿಗೆ 2026ನೇಸಾಲಿಗೆ ಅಮೆರಿಕಾದ ಚಿಕಾಗೋದಲ್ಲಿನೆಲೆಸಿರುವ ಅನಿವಾಸಿ ಕನ್ನಡಿಗಹಾಗೂ ಉತ್ತಮ ಸಾಹಿತ್ಯ ಸಂಶೋಧಕರವಿ ಹಂಜ್ ಅವರು ಆಯ್ಕೆ ಮಾಡಲಾಗಿದೆ.ಮಾ.1ರಂದುನಡೆಯಲಿರುವ ಶ್ರೀವೀರಭದ್ರ ಸ್ವಾಮಿಮಹಾರಥೋತ್ಸವ ಹಾಗೂ ಶ್ರೀಜಗದ್ಗುರುರೇಣುಕಾಚಾರ್ಯ ಜಯಂತಿ ಸಮಾರಂಭದಲ್ಲಿಪ್ರಶಸ್ತಿ ಪ್ರದಾನ ನಡೆಯಲಿದೆ.ಫೆ.27ರಂದುಧ್ವಜಾರೋಹಣ ಮತ್ತು ಹರಿದ್ರಾಲೇಪನದಮೂಲಕ ಜಾತ್ರಾ ಮಹೋತ್ಸವಕ್ಕೆಚಾಲನೆ ದೊರೆಯಲಿದ್ದು,ಫೆ.28ರಂದುದೀಪೋತ್ಸವ,ಕುಂಕುಮೋತ್ಸವಮತ್ತು ಚಿಕ್ಕರಥೋತ್ಸವ ಹಾಗೂಸಂಜೆ ಧರ್ಮ ಮತ್ತು ಶಿಕ್ಷಣ ಚಿಂತನಸಮಾರಂಭ ನಡೆಯಲಿದೆ.ಮಾ.2ರಂದುಶಯನೋತ್ಸವ,ಕೆಂಡಾರ್ಚನೆಹಾಗೂ ಸಂಜೆ ಧರ್ಮ ಮತ್ತು ಮಹಿಳೆಚಿಂತನ ಸಮಾರಂಭ ನಡೆಯಲಿದೆ.ಮಾ.3ರಂದುವಸಂತೋತ್ಸವ,ಭದ್ರಾನದಿತೀರದಲ್ಲಿ ಸುರಗೀ ಸಮಾರಾಧನೆಯೊಂದಿಗೆಜಾತ್ರೆಗೆ ತೆರೆಬೀಳಲಿದೆ.ಈ ಎಲ್ಲಕಾರ್ಯಕ್ರಮಗಳಲ್ಲಿ ನಾಡಿನ ವಿವಿಧಮಠಾಧೀಶರು,ಮಂತ್ರಿಗಳು,ಶಾಸಕರು,ಗಣ್ಯರುಪಾಲ್ಗೊಳ್ಳಲಿದ್ದಾರೆ.