ತರಕಾರಿ, ಸೊಪ್ಪು, ಕಾಳು ಬಳಕೆಗೆ ಸಲಹೆ

 ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಉದ್ಘಾಟಿಸಿದ್ದರು. ಜಯಣ್ಣ, ಚೈತ್ರಾ, ದೇವಿರಮ್ಮ, ಗೀತಾ ಇದ್ದರು.
ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಉದ್ಘಾಟಿಸಿದ್ದರು. ಜಯಣ್ಣ, ಚೈತ್ರಾ, ದೇವಿರಮ್ಮ, ಗೀತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ
  • ಬೆಳವಾಡಿ ಗ್ರಾಮ
ಗುಂಡ್ಲುಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಪೌಷ್ಠಿಕ ಆಹಾರದ ಮಹತ್ವ ಕುರಿತು ಅರಿವು ಮೂಡಿಸಲಾಯಿತು.
ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಜ್ಯೋತಿ ಉದ್ಘಾಟಿಸಿದರು. ಪೌಷ್ಠಿಕ ಆಹಾರ ಹೇಗೆ ಬಳಕೆ ಮಾಡುವುದು, ಯಾವ ಯಾವ ಆಹಾರದಲ್ಲಿ ಯಾವ ಯಾವ ವಿಟಮಿನ್ ಹಾಗೂ ಖನಿಜಾಂಶ ಸಿಗುತ್ತದೆ, ತರಕಾರಿ, ಸೊಪ್ಪು, ಕಾಳುಗಳು, ಹಾಲು, ಮೊಸರು, ಮೊಟ್ಟೆ ಬಳಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಜಯಣ್ಣ, ತಾಲೂಕು ಸಮನ್ವಯಾಧಿಕಾರಿ ಚೈತ್ರಾ, ದೇವಿರಮ್ಮ, ಸೇವಪ್ರತಿನಿಧಿ ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net