ಬಸವಾದಿ ಶರಣರ ವಿಚಾರಧಾರೆ ಅಳವಡಿಸಿಕೊಳ್ಳಿ

 ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ಕದಳಿ ಮಹಿಳಾ ಸಮಾವೇಶದಲ್ಲಿ ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ್​, ವೈದ್ಯೆ ಡಾ.ಭಾಗ್ಯಶ್ರೀ ಪಾಟೀಲ್​ ಅವರಿಗೆ ಅಕ್ಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ಕದಳಿ ಮಹಿಳಾ ಸಮಾವೇಶದಲ್ಲಿ ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ್​, ವೈದ್ಯೆ ಡಾ.ಭಾಗ್ಯಶ್ರೀ ಪಾಟೀಲ್​ ಅವರಿಗೆ ಅಕ್ಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಕಾವ್ಯಶ್ರೀ ಮಹಾಗಾಂವಕರ್​ ಕರೆ
  • ಜೇವರ್ಗಿಯಲ್ಲಿ ಕದಳಿ ಮಹಿಳಾ ಸಮಾವೇಶ
ಜೇವರ್ಗಿ: ಬಸವಣ್ಣ ಸೇರಿ ಬಸವಾದಿ ಶರಣರ ಆಚಾರ&ವಿಚಾರ ಇಂದಿಗೂ ಪ್ರಸ್ತುತವಾಗಿದ್ದು, ಮುಂದಿನ ಪೀಳಿಗೆ ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್​ ಹೇಳಿದರು.
ಬಸವೇಶ್ವರ ಬಡಾವಣೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​, ಕದಳಿ ಮಹಿಳಾ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ, ಕದಳಿ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಅಕ್ಕಮಹಾದೇವಿ ಜಗತ್ತಿನ ಮೊಟ್ಟ ಮೊದಲ ಮಹಿಳಾ ಕವಯಿತ್ರಿ, ಅಕ್ಕನ ವಚನಗಳಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿವೆ. ಸರ್ವ ಜನರಿಗೂ ಮಾರ್ಗದರ್ಶಿಯಾಗಿವೆ. ಲೋಕಾನುಭವ, ಜ್ಞಾನಸಂಪತ್ತು ಹಾಗೂ ಅಭಿವ್ಯಕ್ತಿತ್ವತೆ ಕಂಡು ಬರುತ್ತದೆ ಎಂದರು.
ಸರ್ವ ಸಮಾನತೆ ಹಾಗೂ ವೈಚಾರಿಕ ಪ್ರೆಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಕ್ಕ ಅಂದಿನ ಅನುಭವ ಮಂಟಪಕ್ಕೆ ಆಗಮಿಸಿದ್ದರು. 12ನೇ ಶತಮಾನದಲ್ಲಿ ಸಾಹಿತ್ಯ ಕೃಷಿ ಮಾಡಿದವರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆ ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ಮಹಾ ಶರಣೆಯ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಹೇಳಿದರು.
ಶಖಾಪುರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯ, ನೆಲೋಗಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ, ಸರ್ವಾಧ್ಯೆ ಮಲ್ಲಮ್ಮ ಹಳಿಮನಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ್​ ಹಾಗೂ ವೈದ್ಯೆ ಡಾ.ಭಾಗ್ಯಶ್ರೀ ಪಾಟೀಲ್​ ಅವರಿಗೆ ಅಕ್ಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಬಸವಪಟ್ಟಣದ ಶ್ರೀ ಮರೆಪ್ಪ ಮುತ್ಯಾ, ಪ್ರಮುಖರಾದ ಎಸ್​.ಕೆ.ಬಿರಾದಾರ, ಚನ್ನಮಲ್ಲಯ್ಯ ಹಿರೇಮಠ, ಮಹಾಲ್ಮ ಮಾಲಿ ಪಾಟೀಲ್​, ಮಹಮ್ಮದ್​ ಸೋಪಿ ಸಗರಿ, ದಯಾನಂದ ದೇವರಮನಿ, ಸೋಮಶೇಖರಗೌಡ ಪಾಟೀಲ್​ ಗುಡೂರ, ಡಾ.ಪಿ.ಎಂ.ಮಠ, ಐ.ಎಸ್​.ಹಿರೇಮಠ, ವಿಜಯಕುಮಾರ ತೇಗಲತಿಪ್ಪಿ, ಶಂಭುಲಿಂಗ ದೇಸಾಯಿ, ಷಣ್ಮೂಖಪ್ಪ ಸಾಹು ಗೋಗಿ, ಡಾ.ಶಾಂತಾ ಅಷ್ಟಗೆ, ಸಿದ್ದು ಸಾಹು ಅಂಗಡಿ, ದಾನಪ್ಪಗೌಡ ಹಳಿಮನಿ, ಕಲ್ಯಾಣಕುಮಾರ ಸಂಗಾವಿ, ರಾಜಶೇಖರಯ್ಯ ಹಿರೇಮಠ, ಬಂಗಾರಪ್ಪ ಆಡಿನ, ಶ್ರೀಹರಿ ಕರಕಳ್ಳಿ, ಡಾ.ಹಣಮಂತ್ರಾಯ ರಾಂಪೂರ, ಈಶ್ವರ ಹಿಪ್ಪರಗಿ, ಶರಭು ಕಲ್ಯಾಣಿ, ಸಿದ್ದು ಕೆರೂರ, ಮಲ್ಲಿಕಾರ್ಜುನ ದಂಡುಲಕರ್​, ಸುರೇಶ ಹಿರೇಮಠ, ಕವಿತಾ ಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net