ಮದ್ದೂರು: ಬೇಸಾಯದಲ್ಲಿ ರೈತರು ವೈಜ್ಞಾನಿಕ ಮಾದರಿ ಅಳವಡಿಸಿಕೊಳ್ಳುವ ಜತೆಗೆ ಸರ್ಕಾರದಿಂದ ದೊರೆಯುವ ಸವಲತ್ತು ಸದ್ಬಳಕೆ ಮಾಡಿಕೊಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ರೈತರಿಗೆ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ಅಲೆದಾಡುವ ಬದಲು ಸ್ವಂತ ಗ್ರಾಮದಲ್ಲಿಯೇ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಕಿವಿಮಾತು ಹೇಳಿದರು.
ಕೃಷಿ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರದಿಂದ ವಿಶೇಷ ಅನುದಾನ ತಂದು ಸುಮಾರು 800 ಕೋಟಿ ರೂ.ವೆಚ್ಚದಲ್ಲಿ ನಾಲಾ ಆಧುನಿಕರಣ ಕೈಗೊಳ್ಳಲಾಗಿದೆ. ಇದರಿಂದ ಶೀಘ್ರ ನೀರು ಜಮೀನುಗಳಿಗೆ ಹರಿಯುವಂತೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ರೈತರಿಗೆ ಅನುಕೂಲವಾಗುವ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್, ತಾಂತ್ರಿಕ ಅಧಿಕಾರಿಗಳಾದ ದಯಾನಂದ್, ಅನುಪಮಾ, ಕೃಷಿ ಅಧಿಕಾರಿಗಳಾದ ಕರುಣ, ಭವಾನಿ, ಗಾವಾಸ್ಕರ್ ಇದ್ದರು.