ಒಳ್ಳೆಯ ಜೀವನಶೈಲಿ ಅಳವಡಿಸಿಕೊಳ್ಳಿ

ಕಲಬುರಗಿ ಕೆಬಿಎನ್​ ವಿವಿಯಲ್ಲಿ ಗುರುವಾರ ನಡೆದ ನಿರಂತರ ವೈದ್ಯಕಿಯ ಕಾರ್ಯಕ್ರಮದಲ್ಲಿ ಮೆಡಿಕಲ್​ ನಿಕಾಯದ ಮೊಟ್ಟ ಮೊದಲ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರೊ.ಅಶ್ಫಾಕ್​ ಅಹ್ಮದ್​, ಡಾ.ಜಮಾ ಮೂಸ್ವಿ, ಡಾ.ಗುರುಪ್ರಸಾದ, ಮೀರ್​ ವಿಲಾಯತ್​ ಅಲಿ, ಡಾ.ಅಬ್ದುಲ್​ ಬಷೀರ್​, ಡಾ.ಸಬಾ ನಾಝನೀನ್​, ಡಾ.ಶಹನಾಜ್​ ಇತರರಿದ್ದರು.
ಕಲಬುರಗಿ ಕೆಬಿಎನ್​ ವಿವಿಯಲ್ಲಿ ಗುರುವಾರ ನಡೆದ ನಿರಂತರ ವೈದ್ಯಕಿಯ ಕಾರ್ಯಕ್ರಮದಲ್ಲಿ ಮೆಡಿಕಲ್​ ನಿಕಾಯದ ಮೊಟ್ಟ ಮೊದಲ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರೊ.ಅಶ್ಫಾಕ್​ ಅಹ್ಮದ್​, ಡಾ.ಜಮಾ ಮೂಸ್ವಿ, ಡಾ.ಗುರುಪ್ರಸಾದ, ಮೀರ್​ ವಿಲಾಯತ್​ ಅಲಿ, ಡಾ.ಅಬ್ದುಲ್​ ಬಷೀರ್​, ಡಾ.ಸಬಾ ನಾಝನೀನ್​, ಡಾ.ಶಹನಾಜ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮ ಉಪಕುಲಪತಿ ಪ್ರೊ.ಅಶ್ಫಾಕ್​ ಅಹ್ಮದ್​ ಸಲಹೆ
  • ಕೆಬಿಎನ್​ ವಿವಿಯಲ್ಲಿ ಸಿಎಂಇ ಕಾರ್ಯಕ್ರಮ
ಕಲಬುರಗಿ: ಸಾಂಕ್ರಾಮಿಕವಲ್ಲದ ರೋಗಗಳು ಜೀವನ ಶೈಲಿಗೆ ಸಂಬಂಧ ಹೊಂದಿವೆ. ಇಂತಹ ರೋಗಗಳಿಂದ ಪ್ರತಿವರ್ಷ 45-50 ಮಿಲಿಯನ್​ ಜನ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಖಾಜಾ ಬಂದಾನವಾಜ್​(ಕೆಬಿಎನ್​) ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ.ಅಶ್ಫಾಕ್​ ಅಹ್ಮದ್​ ಸಲಹೆ ನೀಡಿದರು.
ವಿವಿಯಲ್ಲಿ ವೈದ್ಯಕಿಯ ನಿಕಾಯದ ಜೀವ ರಸಾಯನಶಾಸ್ತ್ರ ಮತ್ತು ಸಮುದಾಯ ಔಷಧ ವಿಭಾಗದ ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ನಿರಂತರ ವೈದ್ಯಕಿಯ ಕಾರ್ಯಕ್ರಮ (ಸಿಎಂಇ)ದಲ್ಲಿ ಮಾತನಾಡಿದ ಅವರು, ವಾಯುಮಾಲಿನ್ಯದಿಂದ 7&8 ಮಿಲಿಯನ್​ ಜನ ಮರಣ ಹೊಂದುತ್ತಾರೆ. ವಿವಿಗಳು ಜ್ಞಾನದ ಕೇಂದ್ರವಾಗಿದ್ದು, ಸಮಾಜದ ಆರೋಗ್ಯದ ಒಳಿತಿಗಾಗಿ ಸಂಶೋಧನೆ ಮಾಡಬೇಕು. ನಮ್ಮ ವಿವಿ ಈವರೆಗೆ 50 ಸೆಮಿನಾರ್​ ಮಾಡಿದೆ ಎಂದು ತಿಳಿಸಿದರು.
ಅಕಾಡೆಮಿಕ್​ ಡೀನ್​ ಡಾ.ಜಮಾ ಮೂಸ್ವಿ ಮಾತನಾಡಿ, ಶೇ.80 ಸಾಂಕ್ರಾಮಿಕವಲ್ಲದ ರೋಗಗಳು ಸಣ್ಣ ಆರ್ಥಿಕ ವ್ಯವಸ್ಥೆ ಇರುವ ದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೋವಿಡ್​ ಕಾಲದಲ್ಲಿ ಇಂತಹ ರೋಗಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಾಯಿತು. ದೈಹಿಕ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಮದ್ಯಪಾನ ತ್ಯಜಿಸುವುದು ಅವಶ್ಯಕ ಎಂದರು.
ಮೆಡಿಕಲ್​ ಡೀನ್​ ಡಾ.ಗುರುಪ್ರಸಾದ ಮಾತನಾಡಿ, ಒಳ್ಳೆಯ ಆಹಾರ, ನಿದ್ರೆ, ಒತ್ತಡರಹಿತ ಶೈಲಿ ಆರೋಗ್ಯಕರ ಜೀವನಕ್ಕೆ ನಾಂದಿ ಎಂದು ತಿಳಿಹೇಳಿದರು.
ಕುಲಸಚಿವ ಮೀರ್​ ವಿಲಾಯತ್​ ಅಲಿ, ಐಕ್ಯೂಎಸಿ ನಿರ್ದೇಶಕ ಡಾ.ಅಬ್ದುಲ್​ ಬಷೀರ್​ ಮಾತನಾಡಿದರು. ಆಸ್ಪತ್ರೆ ಅಧೀಕ್ಷಕ ಡಾ.ಸಿದ್ಧಲಿಂಗ ಚೇಂಗಟಿ, ವಿದ್ಯಾರ್ಥಿ ಕಲ್ಯಾಣ ಡೀನ್​ ಡಾ.ಅನೂಪ್​ ದೇಸಾಯಿ, ಕಣ್ಣಿನ ವಿಭಾಗದ ಡಾ.ಸನಾ ನಿಜಾಮಿ, ಡಾ.ಸಿದ್ದೇಶ ಶಿರವಾರ, ಡಾ.ಸುನಿಲ್​ ದೇಶಮುಖ, ಡಾ.ಬಿಲಾಲ್​, ಡಾ.ಫಯೀಮ್​, ಡಾ.ಖುಸ್ರೋ ಅನ್ಸಾರಿ, ಡಾ.ಅತೀಫ್​, ಡಾ.ಆಶಾ, ಡಾ.ಶಿಫಾ, ಡಾ.ಅಸ್ರಾ, ಡಾ.ಪೂರ್ಣಿಮ, ಡಾ.ಹಫ್ಸಾ, ಡಾ.ಮಿರಜಾ ಶರೀಫ್​ ಬೇಗ್​, ಡಾ.ಸಾದಿಯ, ಡಾ.ಮಾಜ, ಡಾ.ಆಯೇಷಾ, ಡಾ.ಆಫಷನ್​, ಡಾ.ಸ್ವಾತಿ ಇತರರಿದ್ದರು.
ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸಬಾ ನಾಝನೀನ್​ ಸ್ವಾಗತಿಸಿದರು. ಸಮುದಾಯ ಔಷಧ ವಿಭಾಗದ ಮುಖ್ಯಸ್ಥೆ ಡಾ.ಶಹನಾಜ್​ ವಂದಿಸಿದರು. ಟ್ಯೂಟರ್​ ಡಾ.ಮೆಹಜಬೀನ್​ ನಿರೂಪಣೆ ಮಾಡಿದರು. ಮೆಡಿಕಲ್​ ನಿಕಾಯದ ಮೊಟ್ಟ ಮೊದಲ ಸಂಚಿಕೆ ಬಿಡುಗಡೆ ಮಾಡಲಾಯಿತು. ಸುಮಾರು 500 ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಅನೇಕ ಗೋಷ್ಠಿಗಳು ಜರುಗಿದವು.
"

ಸಕ್ಕರೆ ರೋಗ, ಬಿಪಿ, ಬೊಜ್ಜು ಇಂದಿನ ದಿನಗಳಲ್ಲಿ ದೇಶಕ್ಕೆ ಸವಾಲಾಗಿವೆ. ಜಾಗೃತಿ, ಪ್ರಾಯೋಗಿಕ ಜ್ಞಾನವೇ ಪರಿಹಾರ. ವಿವಿಧ ವಿಭಾಗಗಳು ಒಟ್ಟಾಗಿ ಅನುಭವ ವಿನಿಮಯ, ಹೊಸ ವಿಧಾನದೊಂದಿಗೆ ಸಮಾಜದ ಆರೋಗ್ಯ ಸುಧಾರಿಸಬೇಕು.

— > ಮೀರ್​ ವಿಲಾಯತ್​ ಅಲಿ ಕುಲಸಚಿವ, ಕೆಬಿಎನ್​ ವಿವಿ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net