ಕಲಬುರಗಿ: ಐಟಿಎಫ್ ಡಬ್ಲ್ಯು35 ಕಲಬುರಗಿಯಲ್ಲಿ ಭಾರತದ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ ಶನಿವಾರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ಎರಡನೇ ಶ್ರೇಯಾಂಕದ ಅಡ್ಕರ್ ಮತ್ತು ರೈನಾ ಜೋಡಿ ಡಬಲ್ಸ್ ಫೈನಲ್ ನಲ್ಲಿ ಸಹ ದೇಶಬಾಂಧವರಾದ ಆಕಾಂಕ್ಷಾ ನಿಟ್ಟೂರ ಮತ್ತು ಸೋಹಾ ಸಾದಿಕ್ ಅವರನ್ನು 6-2, 6-2 ಸೆಟ್ ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟರು. ಜತೆಗೆ 35 ಡಬ್ಲ್ಯುಟಿಎ ಶ್ರೇಯಾಂಕ ಅಂಕಗಳನ್ನು ಮತ್ತು 1,762 ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡರು. ರನ್ನರ್ಸ್ ಅಪ್ ನಿಟ್ಟೂರ ಮತ್ತು ಸಾದಿಕ್ 23 ಅಂಕಗಳು ಮತ್ತು 895 ಡಾಲರ್ ಮೊತ್ತಕ್ಕೆ ಸೀಮಿತರಾದರು.