ತಾಲೂಕಿನ ಜನತೆಗೆ ಹೆಚ್ಚುವರಿ ಕೊಡುಗೆ contribution

ತಾಲೂಕಿನ ಜನತೆಗೆ ಹೆಚ್ಚುವರಿ ಕೊಡುಗೆ contribution
ತಾಲೂಕಿನ ಜನತೆಗೆ ಹೆಚ್ಚುವರಿ ಕೊಡುಗೆ contribution
Published on
ಮುಳಬಾಗಿಲು: ರಾಜ್ಯ ಕಾಂಗ್ರೆಸ್​ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಜತೆಗೆ ತಾಲೂಕಿನ ಜನರಿಗೆ ಹೆಚ್ಚುವರಿ ಗ್ಯಾರಂಟಿ ನೀಡುವ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ. ಆದಿನಾರಾಯಣ ಹೇಳಿದರು. contribution
ನಗರದ ಹೊರವಲಯದ ಕಾಂಗ್ರೆಸ್​ ಕಾರ್ಯಾಲಯದಲ್ಲಿ ಆವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ. ಫೆ.4ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೈದಾನದಲ್ಲಿ ತಾಲೂಕಿನ 20 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್​ ವಿತರಿಸುವ ಜೀವ ಸಂಜೀವಿನಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್​ ತೆಗೆದುಕೊಂಡು ಹೋಗಬಹುದು. ಈಗಾಗಲೇ 9 ಪಂಚಾಯಿತಿಗಳಲ್ಲಿ ಧೀರ್ಘ ಸುಮಂಗಲಿಭವ ಕಾರ್ಯಕ್ರಮ ಪೂರ್ಣಗೊಳಿಸಿದ್ದು, 21 ಗ್ರಾಪಂ ಮತ್ತು ಮುಳಬಾಗಿಲು ನಗರದಲ್ಲಿ ಮುಂದುವರೆಯಲಿದೆ ಎಂದರು.
ರಾಜ್ಯ ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಎಮ್ಮೆನತ್ತ ಜಿ.ರಾಮಲಿಂಗಾರೆಡ್ಡಿ, ಮುಳಬಾಗಿಲು ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಮಾನುಲ್ಲ, ನಗರ ಯುವ ಕಾಂಗ್ರೆಸ್​ ಅಧ್ಯಕ್ಷ ಎಂ.ಲೋಕೇಶ್​, ಮುಖಂಡರಾದ ಎಂ.ಸಿ.ಸರ್ವಜ್ಞ ಗೌಡ, ಗೊಲ್ಲಹಳ್ಳಿ ಸತೀಶ್​, ಅನುಸೂಯಮ್ಮ, ನಾಗನಾಥೇಶ್ವರಿ, ಹನುಮನಹಳ್ಳಿ ಸುಬ್ರಹ್ಮಣಿ, ಆರ್​.ಎಸ್​.ಸುಹಾಸ್​, ಎಂ.ಪಿ.ನವೀನ್​ ಕುಮಾರ್​, ಅಮರ್​, ನಗರಸಭೆ ಮಾಜಿ ಸದಸ್ಯರಾದ ಗರಡಿ ಶಂಕರಪ್ಪ, ಶಾಹಿನ್​ ಪಾಶ, ಕಲೀಲ್​ ಅಹಮದ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net