ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬ್ರಹ್ಮಕುಮಾರಿ ಸಂಸ್ಥೆ ಬುಧವಾರ ಏರ್ಪಡಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅನೇಕ ಜನರು ಮನಶಾಂತಿಯಿಲ್ಲದೆ ಸಾಲ, ಸಮಸ್ಯೆಗಳ ಪರಿಹಾರಕ್ಕಾಗಿ ಚಟಗಳಿಗೆ ಬಲಿಯಾಗುತ್ತಾರೆ. ಗಾಂಜಾ, ಚರಸ, ಸಿಗರೇಟ್, ಬೀಡಿ, ಮದ್ಯಪಾನದ ದಾಸರಾಗಿ ಆರೋಗ್ಯ, ಸಂಪತ್ತು, ಸಂಬಂಧ, ನತೆ, ಗೌರವ ಹೀಗೆ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಚಟಗಳಿಗೆ ಬದಲಾದ ವ್ಯಕ್ತಿಯ ವ್ಯವಹಾರವೂ ಬದಲಾಗುತ್ತದೆ. ಚಟಗಳಿಂದ ಲಾಭವಿಲ್ಲ, ಆದ್ರೆ ಹಾನಿ ಮಾತ್ರ ಪಕ್ಕಾ ಇದೆ ಎಂದು ಎಚ್ಚರಿಸಿದರು.