ಸ್ವಚ್ಛತೆ ಕಾಪಾಡದಿದ್ದರೆ ಬಂದ್​ಗೆ ಕ್ರಮ

ಕೆಂಭಾವಿ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಡಿಚ್​ಒ ಡಾ.ಮಹೇಶ್​ ಬಿರಾದಾರ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್​ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಶುಚಿತ್ವ ಪರಿಶೀಲಿಸಿದರು. ಸಮೀರ್​ ಅಹ್ಮದ್​ ಗುಂಡಗಿ, ದೇವಪ್ಪ ಇದ್ದರು.
ಕೆಂಭಾವಿ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಡಿಚ್​ಒ ಡಾ.ಮಹೇಶ್​ ಬಿರಾದಾರ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್​ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಶುಚಿತ್ವ ಪರಿಶೀಲಿಸಿದರು. ಸಮೀರ್​ ಅಹ್ಮದ್​ ಗುಂಡಗಿ, ದೇವಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಎಚ್ಚರಿಕೆ
  • ಕೆಂಭಾವಿಯ ವಿವಿಧೆಡೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ
ಕೆಂಭಾವಿ: ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಡಿಚ್​ಒ ಡಾ.ಮಹೇಶ ಬಿರಾದಾರ ಶುಕ್ರವಾರ ದಿಢೀರ್​ ದಾಳಿ ನಡೆಸಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ, ಶುಚಿತ್ವ ಪರಿಶೀಲಿಸಿದರು.
ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೆಪಿಎಂಇ ಕಾಯ್ದೆ ಉಲ್ಲಂಸಿದ ಹಿನ್ನೆಲೆಯಲ್ಲಿ ಪಟ್ಟಣದ 3 ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್​ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಪರಿಶೀಲನೆ ವೇಳೆ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರು ಅಲೋಪೋಥಿಕ್​ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದ್ದು ಅಂಥ ವೈದ್ಯರಿಗೆ ಮೌಖಿಕವಾಗಿ ತಿಳಿ ಹೇಳಿದ್ದು ಹೀಗೆ ಮುಂದುವರೆದರೆ ಅವರ ಪರವಾನಗಿ ರದ್ದತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾಳಿ ವೇಳೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿನ ಅಶುಚಿತ್ವ ಕಂಡು ದಂಗಾದ ಡಿಎಚ್​ಒ ಅವರು ಉತ್ತಮ ಚಿಕಿತ್ಸೆ ಜತೆಗೆ ಶುಚಿತ್ವದ ಬಗ್ಗೆ ಹೆಚ್ಚು ಮಹತ್ವ ನೀಡಬೇಕಾದ ವೈದ್ಯರ ಆಸ್ಪತ್ರೆಗಳೆ ತಿಪ್ಪೆ ಗುಂಡಿಯಂತಾಗಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯನ್ನು ಸ್ವಚ್ಛ ಮತ್ತು ಸರಿಯಾದ ರೀತಿಯಲ್ಲಿ ಕಾಪಾಡದಿದ್ದರೆ ಅಂಥ ಆಸ್ಪತ್ರೆಗಳನ್ನು ಕಾಯಂ ಬಂದ್​ ಮಾಡಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಆರೋಗ್ಯ ಕೇಂದ್ರದ ಸಿಬ್ಬಂದಿ ಸಮೀರ್​ ಅಹ್ಮದ್​ ಗುಂಡಗಿ, ದೇವಪ್ಪ ಪಾಸೋಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net