ಮುಖಂಡ ನರಸಿಂಹಮೂರ್ತಿ ಮಾತನಾಡಿ, ಇತ್ತೀಚೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿನ ಬಿ.ಕೃಷ್ಣಪ್ಪವನದಲ್ಲಿ ನಡೆದ ಪ್ರೊ.ಬಿ.ಕೃಷ್ಣಪ್ಪ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೆ.ಎಸ್.ಭಗವಾನ್ ಅವರು ಭಾಗವಹಸಿ ಹಿಂದೂ ಧರ್ಮ, ಪ್ರಭು ಶ್ರಿರಾಮಚಂದ್ರ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ಅತ್ಯಂತ ಕೆಟ್ಟದಾಗಿ, ಅಶ್ಲೀಲ, ಅವಹೇಳನ ಹಾಗೂ ಪ್ರಚೋದನಕಾರಿಯಾಗಿ ಮಾತನಾಡಿ ಕೊಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಶ್ರೀರಾಮರು ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುತ್ರಕಾಮೇಷ್ಠಿಯಾಗದ ಸಂದರ್ಭದಲ್ಲಿನ ಪುರೋಹಿತರಿಗೆ ಹುಟ್ಟಿದ್ದು ಎಂದು ಅಸಂಬದ್ಧ ವ್ಯಾಖ್ಯಾನದ ಮೂಲಕ ಹಿಂದೂಗಳ ಭಾವನೆ ಕೆಡಿಸುವ ಉದ್ದೇಶದಿಂದ ಕಪೋಲಕಲ್ಪಿತ ಕಥೆಯನ್ನು ಕಟ್ಟಿ ಹೇಳಿದ್ದಾರೆ ಎಂದು ಆರೋಪಿಸಿದರು.