ಪೋಕ್ಸೋ ಪ್ರಕರಣದಲ್ಲಿ ಖುಲಾಸೆ​: ಮುರುಘಾ ಶರಣರ ಫಸ್ಟ್ ರಿಯಾಕ್ಷನ್ ​| Muruga Shree

Muruga Shree | ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು
Muruga Shree | ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು
Published on
ದಾವಣಗೆರೆ: ಸ್ವಲ್ಪ ದಿನಗಳ ಕಾಲ ಮೌನವಾಗಿದ್ದು, ಅದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹಂಚಿಕೊಳ್ಲಲಿದ್ದೇನೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯದಿಂದ ಬುಧವಾರ ಖುಲಾಸೆಗೊಂಡ ಬಳಿಕ ದಾವಣಗೆರೆಯ ಶಿವಯೋಗಾಶ್ರಮಕ್ಕೆ ಆಗಮಿಸಿ, ಜಯದೇವ ಶ್ರೀಗಳು ಹಾಗೂ ಅಥಣಿ ಶಿವಯೋಗಿಗಳ ಕರ್ತೃ ಗದ್ದುಗೆಗೆ ಪುಷ್ಪನಮನ ಸಲ್ಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಶರಣರು ನಾವು ಇನ್ನೊಂದಷ್ಟು ದಿನ ಮೌನ ಕಾಪಾಡಿಕೊಳ್ಳಬೇಕಿದ್ದು. ಮಾತನಾಡುವ ಸಂದರ್ಭ ಕಡಿಮೆ ಇದೆ. ಆದ್ದರಿಂದ ಆದಷ್ಟು ಶೀಘ್ರವೇ ಸುದ್ದಿಗೋಷ್ಠಿ ಕರೆದು ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದರು.
ಸತ್ಯಕ್ಕೆ ಜಯ ಸಿಗಲಿದೆ ಎಂದು ಬಯಸಿದ್ದ ನಿಮಗೆ ಒಂದು ಹಂತದಲ್ಲಿ ಆ ಗೆಲುವು ಸಿಕ್ಕಿದೆಯೆ ಎಂಬ ಪ್ರಶ್ನೆಗೆ ‘ನೋ ಕಮೆಂಟ್ಸ್’ ಎನ್ನುವ ಮೂಲಕ ಭಕ್ತರಿಗೆ ಶುಭಕೋರಿದರು. ಮುರುಘಾ ಶರಣರ ಪರ ಆದೇಶ ಹೊರಬಿದ್ದ ಬೆನ್ನಲ್ಲೆ ಶಿವಯೋಗಾಶ್ರಮ ಟ್ರಸ್ಟ್ ಸದಸ್ಯರು, ಭಕ್ತರು ಶಿವಯೋಗ ಮಂದಿರಕ್ಕೆ ಆಗಮಿಸಿ, ಸಿಹಿ ತಿನ್ನುವ ಮೂಲಕ ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮುಖಂಡರಾದ ಎಂ.ಜಯಕುಮಾರ್, ಎಸ್. ಓಂಕಾರಪ್ಪ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net