ಅಧಿಕ ಮಾಸದಲ್ಲಿ ದಾನ-ಧರ್ಮದಿಂದ ಫಲ ಪ್ರಾಪ್ತಿ

ಕೆಂಭಾವಿ ಸಮೀಪ ಕೂಡಲಗಿ ಗ್ರಾಮದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜರ ಮಠದಲ್ಲಿ ಅಧಿಕಮಾಸದ ನಿಮಿತ್ತ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ರುದ್ರ ಸ್ವಾಹಾಕಾರ ಪವಮಾನ ಹೋಮದ ಪೂರ್ಣಾಹುತಿ ನೆರವೇರಿತು. ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜ, ಶಿವಸ್ವಾಮಿ ಶಾಸಿ, ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ, ಬ್ರಹ್ಮಾನಂದ ಭಟ್​ ಇದ್ದರು.

Published on
ಕೆಂಭಾವಿ :ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜರ ಮಠದಲ್ಲಿ ಅಧಿಕಮಾಸದ ನಿಮಿತ್ತ ಭಾನುವಾರ ಲೋಕಕಲ್ಯಾಣಾರ್ಥವಾಗಿ ರುದ್ರ ಸ್ವಾಹಾಕಾರ ಪವಮಾನ ಹೋಮ ಹಾಗೂ ಅನೇಕ ಧಾರ್ಮಿಕ ಕಾರ್ಯಗಳು ಜರುಗಿದವು.
ಧಾರವಾಡದ ಜಗದ್ಗುರು ಶಂಕರಾಚಾರ್ಯ ಸಂಸತ ಪಾಠ ಶಾಲೆಯ ಅಧ್ಯಾಪಕರಾದ ಶಿವಸ್ವಾಮಿ ಶಾಸಿ ಮಾತನಾಡಿ, ಅಧಿಕ ಮಾಸದಲ್ಲಿ ಇಂತಹ ಹೋಮ ಹವನಗಳನ್ನು ಮಾಡುವುದರಿಂದ ಲೋಕ ಕಲ್ಯಾಣವಾಗುತ್ತದೆ ಹಾಗೂ ಜನರಲ್ಲಿ ಸೌಹಾರ್ದತೆ ಬೆಳೆಯುತ್ತದೆ ಅಧಿಕಮಾಸದಲ್ಲಿ ದಾನ ಧರ್ಮಗಳನ್ನು ಮಾಡುವುದರಿಂದ ಅಧಿಕವಾದಂತಹ ಫಲವು ಲಭಿಸುತ್ತದೆ ಎಂದು ಹೇಳಿದರು.
ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕಮಾಸ ಎಲ್ಲ ಜನರಲ್ಲಿ ಸುಖ ಶಾಂತಿ, ನೆಮ್ಮದಿ ನೀಡಲೆಂದು ಪುರುಷೀತ್ತಮ ಮಹಾವಿಷ್ಣುವಿನಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.
ವಲ್ಲಭ ಭಟ್​ ಜೋಶಿ ಅವರು ಅಧಿಕಮಾಸದ ಮಹಾತ್ಮೆಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ 33 ದಂಪತಿಗಳ ಪೂಜೆಯನ್ನು ನೆರವೇರಿಸಲಾಯಿತು. ಪೀಠಾಧಿಪತಿ ಶೀ ಉಮಾಕಾಂತ ಸಿದ್ದರಾಜ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನೆರವೇರಿದವು.
ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ, ಗಂಗಾಧರ ಜೋಶಿ, ಭಿಮಾಶಂಕರ್​ ಜೋಶಿ, ಸಂತೋಷ ಮಹಾರಾಜ, ಸಿಂಧನಮಡು ಬ್ರಹ್ಮಾನಂದ ಭಟ್​, ಕನಕಗಿರಿ ಲೋಕೇಶ ಜೋಶಿ, ಶೀಧರ ಆರ್ಚಕ ಸನ್ನತಿ, ಅನಂತ ಕೊರವಿ, ಸಂಜೀವ ಬೀಳಗಿ, ವಿಶ್ವಂಭರ ಜೋಶಿ, ನಾರಾಯಣ ಭಟ್ಟ ಜೋಶಿ, ತಿರುಮಲಾಚಾರ್ಯ ಜೋಶಿ, ನರಹರಿ ಪೂಜಾರ, ದಿಗಂಬರ್​ ಪೂಜಾರ, ಅಶ್ವಥ ಮಹಾರಾಜ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net