ಕ್ರೀಡೆಯಲ್ಲಿ ಅನಂತಕುಮಾರ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಾಗಡಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ತಿಮ್ಮೇಗೌಡನದೊಡ್ಡಿ ಬಳಿ ಇರುವ ಶ್ರೀ ಎಚ್.ಎನ್. ಅನಂತಕುಮಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಾಗಡಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ತಿಮ್ಮೇಗೌಡನದೊಡ್ಡಿ ಬಳಿ ಇರುವ ಶ್ರೀ ಎಚ್.ಎನ್. ಅನಂತಕುಮಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on

ಬಿಡದಿ :

ತಿಮ್ಮೇಗೌಡನದೊಡ್ಡಿ ಬಳಿ ಇರುವ ಶ್ರೀ ಎಚ್.ಎನ್. ಅನಂತಕುಮಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಿಡದಿಯ ಜೆವಿಐಟಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ನಾಯಕ ಸಂಜಯ್ ನೇತೃತ್ವದ ಬಾಸ್ಕೆಟ್‌ಬಾಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಾಯಕ ಶ್ರೀಶೈಲ್ ನೇತೃತ್ವದ ಖೋ-ಖೋ ತಂಡ ತೀವ್ರ ಪೈಪೋಟಿ ನೀಡಿ ರನ್ನರ್‌ಅಪ್ ಆಗಿದೆ.
ನಾಯಕ ಕಿಶೋರ್ ನೇತೃತ್ವದ ಶಟಲ್‌ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕ ಗಳಿಸಿದೆ.
ಬಾಲಕರ ವೈಯಕ್ತಿಕ ವಿಭಾಗದಲ್ಲಿ ಧ್ರುವ ಕೆ.ಜೆ. ಹ್ಯಾಮರ್ ಥ್ರೋ ಹಾಗೂ ಬಾಕ್ಸಿಂಗ್‌ನಲ್ಲಿ ಬಂಗಾರದ ಪದಕ ಪಡೆದಿದ್ದಾರೆ. 4100 ಮೀ. ರಿಲೇ ಹಾಗೂ 400 ಮೀ. ಓಟದಲ್ಲಿ ಬಿ.ಎಂ. ನಿತಿನ್, 1500 ಮೀ. ಓಟದಲ್ಲಿ ತರುಣ್ ಸಿಂಗ್ ಮತ್ತು ಟ್ರಿಪಲ್ ಜಂಪ್‌ನಲ್ಲಿ ದಿಲೀಪ್ ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಬಾಲಕಿಯರ ಗುಂಪು ಕ್ರೀಡೆಯಲ್ಲಿ ನಾಯಕಿ ತೇಜಸ್ವಿನಿ ನೇತೃತ್ವದ ಫುಟ್‌ಬಾಲ್ ತಂಡ ದ್ವಿತೀಯ ಸ್ಥಾನ, ವೈಯಕ್ತಿಕ ವಿಭಾಗದಲ್ಲಿ ನವ್ಯ ಶ್ರೀ 4100 ಮೀ. ರಿಲೇ ಹಾಗೂ 400 ಮೀ. ಓಟದಲ್ಲಿ ಬಂಗಾರದ ಪದಕ ಗಳಿಸಿದ್ದಾರೆ. ಹ್ಯಾಮರ್ ಥ್ರೋ ವಿಭಾಗದಲ್ಲಿ ಕುಮಾರಿ ರೇವತಿ ಬೆಳ್ಳಿ ಪದಕ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಮಹಾಂತೇಶ್ ಎಸ್. ಶೆಟ್ಟರ್ ಗೌರವಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net