ಚಿಕ್ಕನಾಯಕನಹಳ್ಳಿಯ Distribution of equipment ರೋಟರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರ ಉದ್ಘಾಟನೆ ಹಾಗೂ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ರೋಟರಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಸಿ.ಡಿ.ಸುರೇಶ್, ರೋಟರಿ ಶಾಲೆ ಪ್ರಾಂಶುಪಾಲ ಸತೀಶ್ ಇದ್ದರು.
Published on:
Copied
Follow Us
ಚಿಕ್ಕನಾಯಕನಹಳ್ಳಿ:
ಇಂದಿನ ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಬುದ್ಧಿಶಕ್ತಿ ಇದೆ. ಅಂತಹ
Distribution of equipment
ಬುದ್ಧಿಯನ್ನು ಶೈಕ್ಷಣಿಕವಾಗಿ ಬಳಸಿಕೊಂಡು ಉತ್ತಮ ಸಾಧನೆ ಮಾಡಿ ಸಮಯ ಹಾಳು ಮಾಡಬೇಡಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಕಿವಿಮಾತು ಹೇಳಿದರು.
ಪಟ್ಟಣದ ರೋಟರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಎಸ್ಬಿ ಚಾರಿಟಬಲ್ ಟ್ರಸ್ಟ್ನಿಂದ 2026&-27ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರ ಉದ್ಘಾಟನೆ ಹಾಗೂ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಬಡವ, ಶ್ರೀಮಂತ, ಜಾತಿ, ಧರ್ಮವೆನ್ನದೇ ಯಾರು ಉತ್ತಮವಾಗಿ ಅಧ್ಯಯನ ಮಾಡುತ್ತಾರೋ ಅವರ ಸ್ವತ್ತಾಗುತ್ತದೆ ಎಂದರು.
ಬಿಇಒ ಕಾಂತರಾಜು ಸಿ.ಎಸ್ ಮಾತನಾಡಿ, ಕಳೆದ ಮೂರು ವರ್ಷದಿಂದ ಈ ಶಿಬಿರದಿಂದಾಗಿ ಉತ್ತಮ ಲಿತಾಂಶ ಬರುತ್ತಿದೆ. ಈ ವರ್ಷ ಪ್ರೇರಣಾ ಶಿಬಿರಕ್ಕೆ ಒಟ್ಟು 523 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 100 ಅಂಗ್ಲ ಮಾಧ್ಯಮ ಹಾಗೂ 100 ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗವಿರಂಗಯ್ಯ ಮಾತನಾಡಿ, ಮಕ್ಕಳು ಮೊಬೈಲ್ಗೀಳನ್ನು ಬಿಟ್ಟು ಪುಸ್ತಕ ಹಿಡಿದು ಅಭ್ಯಾಸ ಮಾಡಬೇಕು. ನಿಮ್ಮ ಶೈಕ್ಷಣಿಕ ಅಭಿವೃದ್ಧಿಗಾಗಿ ಪಾಲಕರು, ಶಿಕ್ಷಕರೊಂದಿಗೆ ಶಾಸಕರು ಸಹ ಸಹಕಾರ ನೀಡುತ್ತಿದ್ದು, ಇದನ್ನು ಬಳಸಿಕೊಳ್ಳಿ ಎಂದರು.
ಕಾತ್ರೀಕೆಹಾಳ್ ಕಾಲೇಜಿನ ಪ್ರಾಂಶುಪಾಲ ಶಿವರುದ್ರಯ್ಯ, ಶಿಕ್ಷಕರಾದ ಮಹೇಶ್, ಮಲ್ಲಿಕಾರ್ಜುನ್, ರಮೇಶ್, ಶಿವಣ್ಣ ಇದ್ದರು.