ಕಲಬುರಗಿ ಸರ್ವಜ್ಞ ಶಾಲೆಯಲ್ಲಿ ಗುರುವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಜಿ.ಎಲ್.ಲಕ್ಷಿ$್ಮನಾರಾಯಣ ಚಾಲನೆ ನೀಡಿದರು. ಪೂಜ್ಯ ಮಹಾಂತ ಸ್ವಾಮಿಗಳು, ಪ್ರೊ.ಚನ್ನಾರಡ್ಡಿ ಪಾಟೀಲ್, ಡಾ.ವಿಶ್ವನಾಥ ರಡ್ಡಿ, ಅಭಿಷೇಕ ಪಾಟೀಲ್, ವಿನೂತಾ ಆರ್.ಬಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನ್ಯಾಯಾಧೀಶ ಲಕ್ಷ್ಮೀನಾರಾಯಣ ಹೇಳಿಕೆ
ಸರ್ವಜ್ಞ ಶಾಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ: ವಿದ್ಯಾರ್ಥಿಗಳು ಶಿಸ್ತು, ಸಂಯಮ, ನಿರಂತರ ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಗುರಿಮುಟ್ಟುವ ಛಲ ರೂಢಿಸಿಕೊಂಡಲ್ಲಿ ಸಾಧನೆ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್.ಲಕ್ಷಿ$್ಮನಾರಾಯಣ ಹೇಳಿದರು.
ಸರ್ವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಪ್ರತಿಷ್ಠಾನ ರಾಯಚೂರು, ಸರ್ವ ಮತ್ತು ಜಸ್ಟಿಸ್ ಪಾಟೀಲ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಿಂದ ಗುರುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರು ರಚಿಸಿದ ಮುಂಜಾವಿಗೊಂದು ನುಡಿಕಿರಣಗಳ ದರ್ಶನ ಪ್ರವಚನ ಮಾಲಿಕೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ನುಡಿಮುತ್ತುಗಳನ್ನು ನಿತ್ಯ ವೀಕ್ಷಿಸಿ ಪಾಲನೆ ಮಾಡಿದರೆ ಉತ್ತಮ ಸಂಸ್ಕಾರದೊಂದಿಗೆ ಒಳ್ಳೆಯ ಅಂಕಗಳು ಬರುತ್ತವೆ. ಉತ್ತಮ ಪರಿಸರವಿದ್ದ ಶಾಲೆ, ಶಿಕ್ಷಕರ ಉತ್ತಮ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣವಿದ್ದಲ್ಲಿ ಸಾಧನೆ ಸುಲಭ. ವಿದ್ಯಾರ್ಥಿಗಳು ಪಾಲಕರ ಆಸೆ ಈಡೇರಿಸಬೇಕು ಎಂದರು.
ಮುದಗಲ್ ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಡಾ.ಶಿವರಾಜ ಪಾಟೀಲ್ ಅವರು ಕಷ್ಟಗಳ ಮಧ್ಯೆಯೂ ಛಲ ಬಿಡದೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ದೇಶದ ಸವೋರ್ಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಇವರ ಮುಂಜಾವಿಗೊಂದು ನುಡಿ ಕಿರಣ&365 ಕೃತಿ ಇವರ ಅಮೂಲ್ಯವಾದ ಅನುಭವದಿಂದ ಹೊರಹೊಮ್ಮಿದ ನುಡಿಮುತ್ತುಗಳ ಸಂಗಮ. ಆರೋಗ್ಯಕರ ದೇಹ, ಆರೋಗ್ಯಕರ ಮನಸ್ಸನ್ನು ಹೊಂದಿದ್ದು, ಸನ್ಮಾರ್ಗದಲ್ಲಿ ನಡೆದು ಉತ್ತಮರಾಗಿ ಹೊರಹೊಮ್ಮಬೇಕೆಂಬುದೆ ಈ ಪ್ರವಚನದ ಆಶಯ ಎಂದು ಹೇಳಿದರು.
ಖ್ಯಾತ ನೇತ್ರ ತಜ್ಞ ಡಾ.ವಿಶ್ವನಾಥರೆಡ್ಡಿ ಮಾತನಾಡಿದರು.
ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ನುಡಿಕಿರಣಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಬೆಳಕಾಗಿವೆ. ಆದ್ದರಿಂದ ಇಂಥ ನುಡಿಕಿರಣಗಳ ಪ್ರವಚನ ಎಲ್ಲರೂ ಆಲಿಸಿ, ಪಾಲಿಸಬೇಕು ಎಂದರು.
ನೇತ್ರ ತಜ್ಞೆ ಡಾ.ರಾಜಶ್ರೀ ರೆಡ್ಡಿ, ಸಂಸ್ಥೆ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಪಾಟೀಲ್, ಪ್ರಾಚಾರ್ಯ ವಿನೂತಾ ಆರ್.ಬಿ, ಪ್ರಮುಖರಾದ ಅನಿತಾ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು. ಸಂಸತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ವಿದ್ಯಾವತಿ ನಿರೂಪಣೆ ಮಾಡಿದರು.
"
ಪಿಯು ಎರಡು ವರ್ಷ ಪರಿಶ್ರಮಪಟ್ಟು ಅಧ್ಯಯನ ಮಾಡಿದರೆ ಭವಿಷ್ಯ ಉಜ್ವಲವಾಗಲಿದೆ. ಸರ್ವಜ್ಞ ಸಮೂಹ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡುವ ಪಣ ತೊಡಬೇಕು.