ರಾಜ್ಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಸಾಧಕ ವಿದ್ಯಾರ್ಥಿಗಳು.
Published on:
Copied
Follow Us
ಧಾರವಾಡ: ನಗರದ ಹಳಿಯಾಳ ರಸ್ತೆಯ ಎಕ್ಸಲೆಂಟ್ ನೀಟ್ ಅಕಾಡೆಮಿ ಸಹಯೋಗದ ಓಂ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಬ್ಬರು ರಾಜ್ಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕೊಪ್ಪಳ ತಾಲ್ಲೂಕಿನ ಹನುಮಸಾಗರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಇಂದಿರಾಗಾ೦ಧಿ ವಸತಿ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೃಥ್ವಿರಾಜ ಜೆ. ಬಾಲನಗೌಡರ ಪ್ರಥಮ, ಕಾರ್ತಿಕ ಕುರವತ್ತಿ ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ನಿರ್ದೇಶಕ ಸಚಿನ ಗಿರಿಯಪ್ಪನವರ, ಪ್ರಾಚಾರ್ಯ ಉಮೇಶ ಪುರೋಹಿತ, ಆಡಳಿಕಾತಾಧಿರಿ ಡಾ. ಜಗದೀಶ ಚಿತ್ತರಗಿ, ಶೈಕ್ಷಣಿಕ ಸಂಯೋಜಕ ಪ್ರತಾಪ ಟಿ.ಆರ್., ಸಿದ್ದನಗೌಡ ಕ್ಯಾತನವರ ಹಾಗೂ ಶಿಕ್ಷಕರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.