ಆಚಗಾನಪಲ್ಲಿ ಸಲ್ಲಾಪುರಮ್ಮ ಮೆರವಣಿಗೆ

ಚೇಳೂರು ತಾಲೂಕಿನ ಆಚಗಾನಪಲ್ಲಿ ಗ್ರಾಮದ ಸಲ್ಲಾಪುರಮ್ಮ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಚೇಳೂರು ತಾಲೂಕಿನ ಆಚಗಾನಪಲ್ಲಿ ಗ್ರಾಮದ ಸಲ್ಲಾಪುರಮ್ಮ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on
ಚೇಳೂರು: ತಾಲೂಕಿನ ಆಚಗಾನಪಲ್ಲಿ ಗ್ರಾಮದ ಸಲ್ಲಾಪುರಮ್ಮ ದೇವಿಗೆ ಶ್ರಾವಣ ಮಾಸದ ಪ್ರಯುಕ್ತ ರೈತರು ಪೂಜಿಸಿದರು. ಅಭೀಷೇಕ, ಪೂಜೆ ಮಾಡಿ ತಮಟೆಗಳೊಂದಿಗೆ ಗ್ರಾಮ ದೇವತೆ ಮೆರವಣಿಗೆ ನಡೆಯಿತು. ದೇವಾಲಯಕ್ಕೆ ವಿದ್ಯುತ್​ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಭಿಷೇಕದ ನಂತರ ದೇವಿಗೆ ಹೂಗಳಿಂದ ಅಲಂಕಾರ ಮಾಡಿದರು.
ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ದೇವಾಲಯ ಪ್ರಧಾನ ಅರ್ಚಕ ನಟರಾಜ, ಗ್ರಾಮದ ಎ.ಎನ್​.ಮುರಳಿಮೋಹನ್​, ಚಂದ್ರಶೇಖರ್​, ಶ್ರೀನಿವಾಸ್​, ಎನ್​.ಮುರಳಿ, ನರಸಾಪುರ ಸುರೇಶ್​ರೆಡ್ಡಿ, ಎನ್​.ಎಸ್​.ಶಿವಶಂಕರರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net