ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾದ ರಾಬರಿ ಪ್ರಕರಣದ ಆರೋಪಿಗಳಾದ ಧೀರಾಜ್ ವಾಳ್ವೇಕರ್ , ಮತ್ತು ರವಿ ಸೋನಾರ್ ಅವರನ್ನು ಕರೆದೊಯ್ದ ಸ್ಥಳ ಮಹಜರಿಗೆ ಹೋಗಿದ್ದ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಸದಲಗಾ ಪೊಲೀಸ್ ತಂಡ, ಈ ವೇಳೆ ಸುಖಾ ಸುಮ್ಮನೆ ಪೊಲೀಸರು ನಮ್ಮನು ಬಂಧಿಸಿದ್ದಾರೆ ಎಂದು ಆರೋಪಿಗಳು ಕೂಗಾಡಿ ರಂಪಾಟ ಮಾಡಿದ್ದಾರೆ. ಆರೋಪಿಗಳ ಕುಟುಂಬಸ್ಥರು,ಸ್ಥಳೀಯರು ಪೊಲೀಸರಿಗೆ ನೀವು ನಕಲಿ ಪೊಲೀಸ್ ರು ನಿಮ್ಮ ಗುರುತಿನ ಚೀಟಿ ತೋರಿಸಿ ಎಂದು ಪ್ರಶ್ನಿಸಿದ್ದಾರೆ. ,ನಮ್ಮ ಮಗ ನಿರಪರಾಧಿ,ಆತ ತಪ್ಪು ಮಾಡಿಲ್ಲ ಎಂದು ಕೂಗಾಡಿದ್ದಾರೆ.ಜತೆಗೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಕೂಡಲೇ ಸ್ಥಳೀಯ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಪೊಲೀಸರು ಕರೆ ತಂದಿದ್ದಾರೆ.