ಕೋಲಾರ: ಫ್ಲಿಪ್ಕಾರ್ಟ್ನಲ್ಲಿ ಕಂಪನಿಯಲ್ಲಿ ಮೊಬೈಲ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 2.60 ಲಕ್ಷ ಮೌಲ್ಯದ 10 ಮೊಬೈಲ್ಗಳನ್ನು ಮಾಲೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಲೂರು ತಾಲೂಕು ಮಾದನಹಟ್ಟಿ ಸಮೀಪದ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಕೆಲ ದಿನಗಳಿಂದ ಮೊಬೈಲ್ಗಳು ಕಳವು ಆಗುತ್ತಿದ್ದವು, ಈ ವಿಚಾರವು ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತ್ತು.
ಈ ಕುರಿತು ಕೆಲ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಗುಪ್ತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಲ್ಲೆ ಕೆಲಸ ಮಾಡುತ್ತಿದ್ದ ವಿಶ್ವಾಸ್ ಎನ್ನುವವನ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ತಪು$್ಪ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.