ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಕುಣಿಗಲ್ ಉತ್ಸವ&2025ರ ಪ್ರಯುಕ್ತ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಸೀಮಿತ ಓವರ್ಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕುಣಿಗಲ್ ಉತ್ಸವ ತಾಲೂಕಿನ ಎಲ್ಲ ಜನರ ಹಬ್ಬ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು, ಯುವಕರು, ಹಿರಿಯ ನಾಗರಿಕರು ಎಲ್ಲರೂ ಈ ಹಬ್ಬದಲ್ಲಿ ಸೇರಬೇಕು. ಈ ಹಬ್ಬದಲ್ಲಿ ಕ್ರಿಕೆಟ್ ಮಾತ್ರವಲ್ಲ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಗಿಲ್ಲಿದಾಂಡ್, ಶಟಲ್ ಬ್ಯಾಡ್ಮಿಂಟನ್, ಸ್ವಿಮಿಂಗ್, ಮ್ಯಾರಥಾನ್ ಸೇರಿದಂತೆ ಸಾಕಷ್ಟು ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದೆ, ಈ ಕ್ರೀಡಾ ಕೂಟದಿಂದ ಯುವಕರನ್ನು ಪ್ರೋತ್ಸಾಹಿಸುವ ಜತೆಗೆ, ಯುವಕರಿಗೆ ವೇದಿಕೆಯನ್ನು ಸೃಷ್ಟಿಸಿದೆ ಎಂದರು.