ವರ್ತಮಾನಕ್ಕೆ ಕಾಯಕ ನೀತಿ work ethic

ವರ್ತಮಾನಕ್ಕೆ ಕಾಯಕ ನೀತಿ work ethic
ವರ್ತಮಾನಕ್ಕೆ ಕಾಯಕ ನೀತಿ work ethic
Published on
ಶ್ರೀನಿವಾಸಪುರ: ಸಮಾನತೆಯ ಪ್ರತಿಕವಾಗಿ, ಜಾತ್ಯಾತಿತತೆಯ ರೂವಾರಿಯಾಗಿ, ಪ್ರಜಾಪ್ರಭುತ್ವದ ಪ್ರೆಯಾಗಿ ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಸಾಮಾಜಿಕ ಆಂದೋಲನ ಇಂದಿಗೂ ಪ್ರಸ್ತುತ ಎಂದು ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯೆ ಮಾಯಾ ಬಾಲಚಂದ್ರ ಹೇಳಿದರು.work ethic
ಪಟ್ಟಣದ ನಗರೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು ವಚನಕಾರರ ಮುಂದಾಳಾಗಿ ಸಾರಿದ ಶರಣ ಚಿಂತನೆ, ಅನುಭವ ಮಂಟಪದ ಮೂಲಕ ಜಗದ್ವಾ$್ಯಪಿಯಾಯಿತು. ಕುಲವೊಂದೇ ತನ್ನ ತಾ ಅರಿದವಂಗೆ ಎನ್ನುವ ಮಾನವೀಯ ಮೌಲ್ಯ ಎತ್ತಿ ಹಿಡಿದ ಬಸವಣ್ಣರ ಕಾಯಕ ಯೋಗ ನೀತಿ ವರ್ತಮಾನಕ್ಕೆ ಅತ್ಯಂತ ಅವಶ್ಯ ಎಂದರು.
ಬಸವಣ್ಣನವರು ಲೋಕಹಿತ ಕಾರ್ಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ್ದರು. ಮಹಿಳೆಯರು ವಚನಕಾರ್ತಿಯರಾಗಿ ಹೊರಹೊಮ್ಮಲು ವಿಶಾಲ ವೇದಿಕೆ ಕಲ್ಪಿಸಿಕೊಟ್ಟರು. ಪ್ರಸ್ತುತ ಸಮಾಜಕ್ಕೆ ಇಂಥ ಆದರ್ಶ ಮಾದರಿಯಾಗಬೇಕು ಎಂದು ಆರ್ಯವೈಶ್ಯ ನಗರ್ತ ವಿದ್ಯಾವರ್ಧಕ ಸಂದ ತಾಲೂಕು ನಿರ್ದೇಶಕ ಶಿವಕುಮಾರ್​ ಹೇಳಿದರು.
ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯೆ ಆರತಿ ಮಾತನಾಡಿ, ಮುಂದಿನ ದಿನಗಳಲ್ಲಿ ವಚನ ವಾಚನ, ವ್ಯಾಖ್ಯಾನಗಳ ಕಾರ್ಯಕ್ರಮವನ್ನು, ವೇದಿಕೆಯ ಮೂಲಕ ಹಮ್ಮಿಕೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net