ಲಯನ್ಸ್‌ನಿಂದ ಬಾಂಧವ್ಯ ಬೆಸೆಯುವ ಅದ್ಭುತ ಕಾರ್ಯ

ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಟಿ.ವಿ.ಅನಿಲ್ ಕುಮಾರ್, ಪುಟ್ಟಪ್ಪ, ಬಾಲಕೃಷ್ಣ, ಪಿ.ಕೆ.ವಿಜಯಕುಮಾರ್, ಕೆ.ಎ.ಮಹದೇವಪ್ಪ ಇತರರಿದ್ದರು.
ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಟಿ.ವಿ.ಅನಿಲ್ ಕುಮಾರ್, ಪುಟ್ಟಪ್ಪ, ಬಾಲಕೃಷ್ಣ, ಪಿ.ಕೆ.ವಿಜಯಕುಮಾರ್, ಕೆ.ಎ.ಮಹದೇವಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಕೋ ಆರ್ಡಿನೇಟರ್ ಟಿ.ವಿ.ಅನಿಲ್ ಕುಮಾರ್
  • ಮಂಜುನಾಥ ಸಮುದಾಯ ಭವನ

ಪಿರಿಯಾಪಟ್ಟಣ:

ಲಯನ್ಸ್ ಸಂಸ್ಥೆ ಸಮುದಾಯದ ಸೇವೆಯೊಂದಿಗೆ ಬಾಂಧವ್ಯ ಬೆಸೆಯುವ ಅದ್ಭುತ ಕಾರ್ಯ ಮಾಡುತ್ತಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಕೋ ಆರ್ಡಿನೇಟರ್ ಟಿ.ವಿ.ಅನಿಲ್ ಕುಮಾರ್ ಬಣ್ಣಿಸಿದರು.

ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಬುಧವಾರ ಪಿರಿಯಾಪಟ್ಟಣ ಲಯನ್ಸ್ ಕ್ಲಬ್ನಿಂದ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಸಮಸ್ಯೆಗೆ ಸಿಲುಕಿದಾಗ ಲಯನ್ಸ್ ಕ್ಲಬ್ ನೆರವಿಗೆ ಬರಲಿದೆ ಎಂಬುದು ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ ಎಂದರು.
ಜೋನಲ್ ಅಧ್ಯಕ್ಷ ಪುಟ್ಟಪ್ಪ ಮಾತನಾಡಿ, ಪದಗ್ರಹಣ ಮೂಲಕ ಅಧಿಕಾರ ಸ್ವೀಕರಿಸುವುದು ಕೇವಲ ಬ್ಯಾಡ್ಜ್ ಮತ್ತು ಹುದ್ದೆಗಾಗಿ ಅಲ್ಲ. ಬದಲಾಗಿ ಉತ್ತಮ ಸಮಾಜ ಸೇವೆ ಮಾಡುವ ಮೂಲಕ ಕ್ಲಬ್‌ನ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಬಡ ಕುಟುಂಬವೊಂದು ವಿದ್ಯುತ್ ಸಂಪರ್ಕ ಪಡೆಯಲು ಕ್ಲಬ್‌ನಿಂದ 15,000 ರೂ.ಗಳ ದೇಣಿಗೆ ನೀಡಲಾಯಿತು. ಜಿಲ್ಲಾ ಪ್ರಾಂತ್ಯಾಧ್ಯಕ್ಷ ಬಾಲಕೃಷ್ಣ, ಅಧ್ಯಕ್ಷ ಪಿ.ಕೆ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎ.ಮಹದೇವಪ್ಪ ಮಾತನಾಡಿದರು. ನೂತನ ಪದಾಧಿಕಾರಿಗಳಾಗಿ ಸುಬ್ರಹ್ಮಣ್ಯ, ಮಂಜುನಾಥ್ ಸಿಂಗ್, ಪಿ.ಕೆ.ಕುಮಾರ್, ಆನಂದ್, ಸ್ವಾಮಿ, ನವನೀತ್, ದೊಡ್ಡೇಗೌಡ, ಲವಕುಮಾರ್ ಅಧಿಕಾರ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net