ಮನೆಗೊಂದು ಮರ, ಪ್ರಕೃತಿ ನೀಡುವುದು ವರ; ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಮನೆಗೊಂದು ಮರ, ಪ್ರಕೃತಿ ನೀಡುವುದು ವರ; ಪರಿಸರ ಸಂರಕ್ಷಣೆ ಎಲ್ಲರ ಹೊಣೆ
ಮನೆಗೊಂದು ಮರ, ಪ್ರಕೃತಿ ನೀಡುವುದು ವರ; ಪರಿಸರ ಸಂರಕ್ಷಣೆ ಎಲ್ಲರ ಹೊಣೆ
Published on

ಪ್ರಮುಖ ಮುಖ್ಯಾಂಶಗಳು

  • ಮನೆಗೊಂದು ಮರ, ಪ್ರಕೃತಿ ನೀಡುವುದು ವರ
  • ಪರಿಸರ ಸಂರಕ್ಷಣೆ ಎಲ್ಲರ ಹೊಣೆ
  • ಬೆಂಗಳೂರಿನಲ್ಲಿ ಎಲ್ಲರೂ ಮನೆಗೊಂದರಂತೆ ಸಸಿ ನೆಡಬೇಕು

ಬೆಂಗಳೂರು: ಜೀವನದಲ್ಲಿಸ್ವಂತ ಮನೆ ನಿರ್ಮಿಸಬೇಕೆಂಬಕನಸು ಬಹುತೇಕರದ್ದು.ಹಾಗೆ ಕನಸುಹೊಂದಿರುವವರು;ಮನೆ ಹೀಗಿರಬೇಕು,ಹಾಗಿರಬೇಕು.ಇಷ್ಟು ದೊಡ್ಡದಿರಬೇಕು,ಇದೇ ಬಣ್ಣ ಹಚ್ಚಬೇಕುಇತ್ಯಾದಿ ವಿಷಯಗಳನ್ನು ಮನಸ್ಸಿನಲ್ಲಿಇರಿಸಿಕೊಂಡಿರುತ್ತಾರೆ.ಅಂತಹ ಕನಸುಗಳ ಜೊತೆಗೆ ಮನೆಗೊಂದು ಮರವಿರಬೇಕೆಂಬಮತ್ತೊಂದು ಸಂಕಲ್ಪವನ್ನು ಕಡ್ಡಾಯವಾಗಿಎಲ್ಲರೂ ಮಾಡಬೇಕು.

ಹೆಚ್ಚುತ್ತಿರುವಜಾಗತಿಕ ತಾಪಮಾನದ ಏರಿಕೆ,ಶುದ್ದಗಾಳಿಯಕೊರತೆ, ಪರಿಸರಮಾಲಿನ್ಯದ ಅಪಾಯವನ್ನು ನಿವಾರಿಸಲುಪ್ರತಿ ಮನೆಗೊಂದು ಮರ ಬೆಳೆಸುವಸಂಕಲ್ಪ ಅತ್ಯಗತ್ಯ.ಹೊಸದಾಗಿ ಮನೆನಿರ್ಮಿಸುವರು ಮನೆ ಆವರಣದಲ್ಲಿಹೂವಿನ ಗಿಡಗಳು,ಅಲಂಕಾರಿಕಗಿಡಗಳನ್ನು ಬೆಳೆಸುವುದು ಸಾಮಾನ್ಯ.ಅವುಗಳ ಜೊತೆಗೆಒಂದಾದರೂ ಬೃಹತ್ ಮರವನ್ನುಬೆಳೆಸಬೇಕು.ಅದು ಲ ನೀಡುವಅಥವಾ ಔಷಧೀಯ ಗುಣ ಹೊಂದಿರುವಮರವಾಗಿದ್ದರೆ ಒಳಿತು. ಬಿಲ್ವ,ಬನ್ನಿ,ಬೇವು,ಅರಳಿಯಂತಹಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ಬಿಡುಗಡೆ ಮಾಡುವ ಹಾಗೂ ಔಷದೀಯಅಂಶಗಳನ್ನು ಬಿಡುಗಡೆ ಮಾಡುವಮರಗಳನ್ನು ಬೆಳೆಸುವುದರಿಂದವಾತಾವರಣದ ಶುದ್ಧಿಯೊಂದಿಗೆ ಆಮರದ ಸಮೀಪ ಓಡಾಡುವವರಿಗೂ ಹೆಚ್ಚಿನಲಾಭವಾಗುತ್ತದೆ.ಪರಿಸರಕ್ಕೆಕೊಡುಗೆ, ಮಾಲಿನ್ಯನಿಯಂತ್ರಣ,ತಾಪಮಾನದ ತಗ್ಗುವುದುಸೇರಿದಂತೆ ಹಲವು ಪ್ರಯೋಜನಗಳುಇದರಿಂದ ಉಂಟಾಗುತ್ತವೆ.

ವೈಯಕ್ತಿಕಮನೆ ನಿರ್ಮಿಸುವವರು ಮರ ಬೆಳೆಸಲುಸಾಧ್ಯವಿದೆ.ಆದರೆ ಅಪಾರ್ಟ್‌ಮೆಂಟ್‌ನಂತಹಬೃಹತ್ ವಸತಿ ಸಮುಚ್ಛಯಗಳಲ್ಲಿವೈಯಕ್ತಿವಾಗಿ ಸಾಧ್ಯವಿಲ್ಲದಿದ್ದರೂ,ಎಷ್ಟು್ಲಾಟ್‌ಗಳಿರುತ್ತವೆಯೋ ಕನಿಷ್ಟಅಷ್ಟು ಮರಗಳನ್ನಾದರೂ ಬೆಳೆಸಲುಜಾಗ ಮೀಸಲಿಡಬೇಕು.ಹಾಗೂ ಅನುಮತಿನೀಡಬೇಕಾದ ಸಂಸ್ಥೆಗಳು ಇದನ್ನೊಂದುನಿಯಮದಂತೆ ಪಾಲಿಸಬೇಕು.ಸ್ವಂತ ನಿವೇಶನದಲ್ಲಿಮನೆ ನಿರ್ಮಿಸುವವರಿಗೆ ಅನುಮತಿನೀಡುವಾಗಲೂ ಗಿಡ-ಮರಬೆಳೆಸುವ ಸಂಬಂಧ ಕಟ್ಟುನಿಟ್ಟಿನನಿಯಮ ರೂಪಿಸಬೇಕು.ಹೀಗಾದಾಗಬೆಂಗಳೂರಿನಂತಹ ಬೃಹತ್ ನಗರಗಳಲ್ಲಿಪರಿಸರ ಪ್ರಜ್ಞೆ ಮೂಡುವುದಕ್ಕೆಸಾಧ್ಯ.

ಕ್ರಮಬದ್ಧ ತ್ಯಾಜ್ಯನಿರ್ವಹಣೆ ಎಲ್ಲರ ಹೊಣೆ

ನಗರದಬೃಹತ್ ಸಮಸ್ಯೆಗಳಲ್ಲಿ ಒಂದಾದತ್ಯಾಜ್ಯ ನಿರ್ವಹಣೆ ದಿನದಿಂದದಿನಕ್ಕೆ ಮತ್ತಷ್ಟು ಕಗ್ಗಂಟಾಗುತ್ತಿದೆ.ಈ ಬಗ್ಗೆ ಪ್ರತಿಮನೆಯಲ್ಲೂ ಜಾಗೃತಿ ಉಂಟಾಗಬೇಕು.ನನ್ನ ತ್ಯಾಜ್ಯನಿರ್ವಹಣೆ ನನ್ನ ಹೊಣೆ ಎಂಬ ಜಾಗೃತಿಅವಶ್ಯವಿದೆ. ಹೊಸದಾಗಿ ಮನೆನಿರ್ಮಾಣ ಮಾಡುವವರು ತ್ಯಾಜ್ಯನಿರ್ವಹಣೆ ಬಗ್ಗೆ ಕಟ್ಟುನಿಟ್ಟಿನಕ್ರಮ ಅನುಸರಿಸಬೇಕು.ಹಸಿ ಕಸ,ಒಣ ಕಸಗಳನ್ನುವಿಂಗಡಿಸುವುದು,ಕಸವನ್ನುಎಲ್ಲೆಂದರಲ್ಲಿ ಚೆಲ್ಲದಿರುವುದು,ಸುತ್ತಮುತ್ತಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆಸ್ಥಳೀಯ ಆಡಳಿತದ ನಿಯಮ ಮತ್ತುನಿರ್ದೇಶನಗಳನ್ನು ಪಾಲಿಸಬೇಕು.

ಬೆಂಗಳೂರುಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಗರದ ವ್ಯಾಪ್ತಿಯಲ್ಲಿಸುಮಾರು 15 ಲಕ್ಷಸಸಿಗಳನ್ನು ನೆಡುವ ಮಹತ್ವದಯೋಜನೆಯನ್ನು ಇತ್ತೀಚೆಗೆ ಅನುಷ್ಠಾನಮಾಡಿದೆ. ಜೊತೆಗೆಬಿಡಿಎ ಅಭಿವೃದ್ಧಿ ಪಡಿಸುವನಿವೇಶನಗಳಲ್ಲಿ ಮನೆಕಟ್ಟುವಾಗಒಂದಾದರೂ ಮರವನ್ನು ಬೆಳೆಸುವನಿಯಮವನ್ನು ಜಾರಿಗೆ ತರುವುದುಅವಶ್ಯವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net