

ಪ್ರಮುಖ ಮುಖ್ಯಾಂಶಗಳು
ಕಲ್ಯಾಣಬಡಾವಣೆಯ ಬಸವ ಮಂಟಪದಲ್ಲಿ ವಚನಜ್ಯೋತಿಬಳಗದ ವತಿಯಿಂದ ಆಯೋಜಿಸಿದ್ದಅಕ್ಕ ಮಹಾದೇವಿಗೆ ವಚನ ಪ್ರಣಾಮಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ವಚನಜ್ಯೋತಿಬಳಗದ ಅಧ್ಯಕ್ಷ ಪಿನಾಕಪಾಣಿಮಾತನಾಡಿ, ಕಲ್ಯಾಣಬಡಾವಣೆಯ ಬಸವ ಮಂಟಪದಲ್ಲಿ ವಚನಜ್ಯೋತಿಬಳಗ ಆಯೋಜಿಸಿದ್ದ “ಮಹಾದೇವಿಯಕ್ಕನವರಿಗೆವಚನ ಪ್ರಣಾಮ” ಕಾರ್ಯಕ್ರಮದಲ್ಲಿಮಾತನಾಡಿದ ಅವರು ಅಕ್ಕನ ಭಾವಗೀತಾತ್ಮಕವಾದಅನುಭಾವಗಳು ಒಂದೆಡೆ ಆಧ್ಯಾತ್ಮಿಕನಿಲುವನ್ನು ಅಭಿವ್ಯಕ್ತಗೊಳಿಸಿದರೆ,ಮತ್ತೊಂದೆಡೆಜೀವನದ ನೋವು ನಲಿವುಗಳನ್ನುಪ್ರತಿಬಿಂಬಿಸುತ್ತಿದ್ದುಲಭ್ಯವಿರುವ ೪೩೪ ವಚನಗಳಲ್ಲಿಪ್ರತಿಯೊಂದು ಓದುಗರನ್ನುಆಕರ್ಷಿಸುತಿದ್ದು,ಅಕ್ಕನ ನಿಸರ್ಗಪ್ರೇಮ, ಪಶುಪಕ್ಷಿಗಳೊಡನೆ ಅವಳ ಸಂವಾದ,ಚೆನ್ನಮಲ್ಲಿಕಾರ್ಜುನನಮೋಹ, ಸಜೀವದೃಷ್ಟಾಂತಗಳು,ಮಾನವೀಯ ಜೀವಂತಿಕೆಯಅಂಶಗಳು ಉಸಿರಿನಷ್ಟು ಸಹಜವಾಗಿವ್ಯಕ್ತವಾಗಿದ್ದು ತಾನೂ ಬದುಕಿ,ಇತರರನ್ನೂನೈತಿಕತೆಯ ಭಕ್ತಿಮಾರ್ಗದೆಡೆಗೆಕರೆದೊಯ್ಯಬಲ್ಲ ವ್ಯಕ್ತಿತ್ವವನ್ನುಅಕ್ಕನ ವಚನಗಳಲ್ಲಿ ಕಾಣುತ್ತೇವೆಎಂದು ವಿವರಿಸಿ ಬಸವಣ್ಣ ಅಲ್ಲಮಮಾತ್ರವಲ್ಲದೆ ಸಕಲ ಶರಣರಿಂದಲೂಅಕ್ಕ ಎಂದು ಕರೆಯಿಸಿಕೊಂಡ ಮಹಾದೇವಿಕನ್ನಡದ ಅಕ್ಕ ಎಂದು ಬಣ್ಣಿಸಿದರು.
ಸ್ಪರ್ಧಾತ್ಮಕಜಗತ್ತಿನಲ್ಲಿ,ಮೊಬೈಲ್ ಪ್ರಪಂಚದಲ್ಲಿಮುಳುಗಿಹೋಗಿರುವ ಬದುಕಿನ ಬವಣೆಯಲ್ಲಿಅಕ್ಕನ ವಚನಗಳು ನಿಜಕ್ಕೂಸಂಜೀವಿನಿಯಾಗಿವೆ ಎಂದು ಹೇಳಿದಪಿನಾಕಪಾಣಿ ಅಕ್ಕ ಹೇಳಿರುವ“ಲೋಕದೊಳಗೆ ಹುಟ್ಟಿದ ಬಳಿಕಸ್ತುತಿನಿಂದೆಗಳು ಬಂದಡೆ ಮನದಲ್ಲಿಕೋಪವ ತಾಳದೆ ಸಮಾಧಾನಿಯಾಗಿರಬೇಕು”ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು.ಕಲ್ಯಾಣದ ಅನುಭವಮಂಟಪದಿAದಹೊರಡುವ ಮುನ್ನ ಎಲ್ಲ ಶರಣರಲ್ಲಿಅವಳು ವಿಜ್ಞಾಪಿಸಿ ಕೊಡುವ ಭಾಷೆ“ನಿಮ್ಮ ಮಂಡೆಗೆ ಹೂವ ತರುವೆನಲ್ಲದೆಹುಲ್ಲ ತಾರೆನು” ಪ್ರತಿಯೊಬ್ಬರುತಮ್ಮ ಕುಟುಂಬ ಮತ್ತು ಸಮಾಜಕ್ಕೆಕೊಡುವ ಭಾಷೆಯಾಗಬೇಕಾಗಿದೆ ಎಂದುಅಭಿಪ್ರಾಯಪಟ್ಟರು.ಕೇವಲ ನಾರಿಲೋಕಕ್ಕೆಮಾತ್ರ ಮಹಾದೇವಿಯಕ್ಕ ಸೀಮಿತವಲ್ಲ,ಅಥವಾ ಒಂದು ಭಾಷೆ,ಧರ್ಮಕ್ಕೆ ಅಲ್ಲ.ಅಕ್ಕ ಸಮಸ್ತಜಗತ್ತಿಗೆ ಸೇರಿದವಳಾಗಿದ್ದುಅಕ್ಕನಂತಹ ವ್ಯಕ್ತಿತ್ವ ಮತ್ತೊಂದಿಲ್ಲ.ಅಕ್ಕನಿಗೆ ಅಕ್ಕನೇಸಾಟಿ. ಮಹಾದೇವಿಯಕ್ಕಜಗದ ಬೆಳಕು ಎಂದು ವರ್ಣಿಸಿದರು.
ರೇಷ್ಮೆಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕಿಶ್ರೀಮತಿ ರೂಪಾ ಪ್ರಸಾದ್ ಉಪನ್ಯಾಸನೀಡಿ ಉಡುತಡಿಯಲ್ಲಿ ಹುಟ್ಟಿಚೆಂದವಾಗಿ ಬೆಳೆದು ಸ್ಥಳೀಯ ರಾಜಕೌಶಿಕನ ಮೋಹಪಾಶಕ್ಕೆ ಒಳಗಾಗದೆ,ಅತ್ಯಂತಬುದ್ದಿವಂತಿಕೆಯಿAದಹೆತ್ತವರನ್ನು ಪಾರು ಮಾಡಿದ್ದಲ್ಲದೆ,ನಡೆಸಲು ಸಾಧ್ಯವಾಗದಷರತ್ತುಗಳನ್ನು ಹಾಕಿ ವಚನಭಂಗವನ್ನುಮಾಡಿದ ಕೌಶಿಕ ರಾಜನನ್ನು ಧಿಕ್ಕರಿಸಿ ಕಾಡುಮೇಡುಗಳಲ್ಲಿ ಸಂಚರಿಸಿಚನ್ನಮಲ್ಲಿಕಾರ್ಜುನನಹುಡುಕಾಡಿ ಅನುಭವ ಮಂಟಪದಲ್ಲಿಎಲ್ಲರಿಂದಲೂ ಸೈ ಎನಿಸಿಕೊಂಡುಮಹಾದೇವಿಯಕ್ಕಳಾದವಳು ಎಂದುವಿವರಿಸಿದರು.
ಕಲ್ಯಾಣಗೃಹನಿರ್ಮಾಣ ಸಹಕಾರ ಸಂಘ ಬಡಾವಣೆಯನಾಗರೀಕರ ಕ್ಷೇಮಾಭಿವೃದ್ಧಿ ಸಂಘದಮಾಜಿ ಅಧ್ಯಕ್ಷ ಶ್ರೀ ಚನ್ನಮಲ್ಲಯ್ಯಕಾರ್ಯಕ್ರಮವನ್ನು ಉದ್ಘಾಟಿಸಿದರು.ವಚನ ಕಲಿಕಾವಿದ್ಯಾರ್ಥಿಗಳು ಅಕ್ಕನ ವಚನಗಳನ್ನುಹಾಡಿ ಅಕ್ಕನಿಗೆ ಪ್ರಣಾಮಿಸಿದರು.ವಚನಜ್ಯೋತಿಬಳಗದ ಪ್ರಧಾನ ಕಾರ್ಯದರ್ಶಿ ಪ್ರಭುಇಸುವನಹಳ್ಳಿ,ಮುಖ್ಯ ಕಾರ್ಯನಿರ್ವಾಹಕರಾಜಾ ಗುರುಪ್ರಸಾದ್,ಗಾಯಕಿಯರಾದಮೀನಾಕ್ಷಿ ಮೇಟಿ,ಟಿ.ಎಂ.ಜಾನಕಿ,ಕಲಿಕಾ ತರಗತಿಯಕಾತ್ಯಾಯಿನಿ,ಪುಷ್ಪಲತ,ಲೀಲಾವತಿ,ವಿಜಯ ವಚನಯಾನದಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.