ಶಿರಾ: ಬಸವಣ್ಣನವರು 12ನೇ ಶತಮಾನದಲ್ಲಿ ವೈದಿಕ ಆಚರಣೆ ಮೆಟ್ಟಿನಿಂತು ಸಂಸತಕ್ಕೆ ಬದಲಾಗಿ ಕನ್ನಡದಲ್ಲಿ ವಚನ ಬರೆಯುತ್ತಾರೆ. ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ ದೂರ ಮಾಡಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು ಉಪನ್ಯಾಸ ನೀಡಿದ ಉಪನ್ಯಾಸಕ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕು ಆಡಳಿತದಿಂದ ನಗರದ ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿಯಲ್ಲಿ ಮಾತನಾಡಿ, 8ನೇ ವಯಸ್ಸಿನಲ್ಲಿಯೇ ಗಂಡು ಮತ್ತು ಹೆಣ್ಣಿನ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿ ಮನೆ ಬಿಟ್ಟು ಕೂಡಲಸಂಗಮ ಸೇರುತ್ತಾರೆ. ಅವರ ತತ್ವಾದರ್ಶ ಇಂದಿಗೂ ಮಾದರಿಯಾಗಿವೆ ಎಂದರು.
ತಹಸೀಲ್ದಾರ್ ಆನಂದ್ ಕುಮಾರ್ ಮಾತನಾಡಿ, ಬಸವಣ್ಣನವರು ವಿಶ್ವ ಮಾನವ ಸಂದೇಶ ಸಾರಿದವರು. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಮಾದರಿಯಾಗಿವೆ. ಬಸವಣ್ಣನವರು ಕೇವಲ ವಚನಕಾರರಲ್ಲ ಅವರು ತತ್ವಾನಿಗಳು ಎಂದರು.