ಇಷ್ಟಲಿಂಗ ಪೂಜೆಗೆ ಅತ್ಯಂತ ಮಹತ್ವದ ಸ್ಥಾನ

ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆಯುವ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಪೂಜ್ಯ ಸತ್ಯಕ್ಕತಾಯಿ, ಗೌತಮ ಜಾಧವ, ಆಕಾಶ ಖಂಡಾಳೆ, ಸುಭಾಷ ರಗಟೆ, ರವಿ ಬೇಲೂರೆ, ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೆ, ಚನ್ನಪ್ಪ ಇಜಾರೆ, ಸವಿತಾ ರಗಟೆ, ಉಷಾ ಕನ್ನಾಡೆ, ಮೀನಾ ಜಾಧವ, ಗುರುದೇವಿ ಆನಿಮಠ, ಲಕ್ಷಿ$್ಮ ಬಿರಾದಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೂಜ್ಯ ಡಾ.ಗಂಗಾಂಬಿಕಾ ಅಕ್ಕ
  • ಬಸವಕಲ್ಯಾಣದಲ್ಲಿ ಕರಪತ್ರ ಬಿಡುಗಡೆ ಸಮಾರಂಭ
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಮತ್ತು ಶರಣರು ಇಷ್ಟಲಿಂಗ ಪೂಜೆಯ ಮೂಲಕ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿ ಹಾಗೂ ಸಮಾನತೆಯನ್ನು ಸಾರಿದರು. ಇದು ಅಂತರಂಗದ ಶಕ್ತಿಯನ್ನು ಪರಮಾತ್ಮನೊಂದಿಗೆ ಬೆಸೆಯುವ ಸಾಧನವಾಗಿದೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ನಡೆಯಲಿರುವ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಅಧ್ಯಾತ್ಮದ ಹಕ್ಕನ್ನು ನೀಡಿದ 12ನೇ ಶತಮಾನದ ಶರಣರ ಪರಂಪರೆಯಲ್ಲಿ ಇಷ್ಟಲಿಂಗ ಪೂಜೆಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.
ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ, ಹುಲಸೂರು ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ, ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ, ರವಿ ಬೇಲೂರೆ, ನಿವೃತ್ತ ಶಿಕ್ಷಕ ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೇಡೆ, ಚನ್ನಪ್ಪ ಇಜಾರೆ, ಸವಿತಾ ರಗಟೆ, ಉಷಾ ಕನ್ನಾಡೆ, ಮೀನಾ ಜಾಧವ, ಗುರುದೇವಿ ಆನಿಮಠ, ಲಕ್ಷಿ$್ಮ ಬಿರಾದಾರ ಇತರರಿದ್ದರು, ರೇಣುಕಾ ಹೋಗ್ತಾಪುರೆ ಸ್ವಾಗತಿಸಿ ನಿರೂಪಣೆ ಮಾಡಿದರು.
ಶರಣ ವಿಜಯೋತ್ಸವ ಅ.11ರಿಂದ: 2026ನೇ ಸಾಲಿನ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯನ್ನು ಅಕ್ಟೋಬರ್​ 11 ರಿಂದ 21 ರವರೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಉತ್ಸವದ ನಿಮಿತ್ತ ವಿವಿಧ ಸ್ಪರ್ಧೆ ಆಯೋಜಿಸಲು ಹಲವರು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net