ಅಧಿಕಾರಿಯೊಬ್ಬರ ವರ್ಗಾವಣೆ ವಿಷಯದಲ್ಲಿ ಹಿರಿಯ ಸಚಿವರು ಅಸಮಾಧಾನ ದಾಖಲಿಸಿದ್ದರು. ಇದೂ ಕೂಡ ಸರ್ಕಾರದ ಮಟ್ಟದಲ್ಲಿ ತೀವ್ರ ಚರ್ಚೆಯಾಯಿತು. ಹಾಗೆಯೇ, ಈ ಇಡೀ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದಲ್ಲಿ ಇಬ್ಬರು, ಮೂವರಿಗೆ ಅಸಮಾಧಾನ ಇರುವುದು ನಿಜ. ನನಗೆ ಸಿಕ್ಕಿರುವ ಅವಕಾಶದ ಬಗ್ಗೆ ಖುಷಿಯೂ ಇಲ್ಲ, ಅಸಮಾಧಾನವೂ ಇಲ್ಲ. ರಾಜಕೀಯದಲ್ಲಿ ಪ್ರಮೋಷನ್ ಪಡೆದುಕೊಳ್ಳಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ, ಎಂಬ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತಮ್ಮ ಅಭಿಪ್ರಾಯ ದಾಖಲಿಸಿದರು.