ಕೊರಟಗೆರೆ: ತಾಲೂಕಿನ ಕಾವಲುಬೀಳು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಸುಮಾರು ಎರಡು ವರ್ಷ ವಯಸ್ಸಿನ ಚಿರತೆ ಮರಿಯೊಂದು ಗುರುವಾರ ರಾತ್ರಿ ಸೆರೆಯಾಗಿದೆ.
ಪಟ್ಟಣದ 4ನೇ ವಾರ್ಡ್ ವ್ಯಾಪ್ತಿಯ ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಅವರ ನಾಯಿಯ ಮೇಲೆ ಮಂಗಳವಾರ ಚಿರತೆ ದಾಳಿ ನಡೆಸಿದ್ದರಿಂದ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಅಧಿಕಾರಿಗಳು ಬೋನನ್ನು ಇರಿಸಿದ್ದರು
.
ವಿಷಯ ತಿಳಿದ ಕೂಡಲೇ ಡಿಆರ್ಎಫ್ಒ ದಿಲೀಪ್ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಚಿರತೆಯನ್ನು ಸುರಕ್ಷಿತವಾಗಿ ಬೇರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.