ಹಿಂದುಗಳಿಗಾಗಿ ಜೀವ ತ್ಯಾಗ ಮಾಡಿದ ನಾಯಕ Hindus

ಹಿಂದುಗಳಿಗಾಗಿ ಜೀವ ತ್ಯಾಗ ಮಾಡಿದ ನಾಯಕ Hindus
ಹಿಂದುಗಳಿಗಾಗಿ ಜೀವ ತ್ಯಾಗ ಮಾಡಿದ ನಾಯಕ Hindus
Published on
ಗೌರಿಬಿದನೂರು: ಮುಖರ್ಜಿ ಅವರು ಸ್ವಾತಂತ್ರೊ$್ಯತ್ಸವ ಹಿಂದೂಗಳ ಮೇಲಿನ ಶೋಷಣೆ ವಿರುದ್ಧ ಪ್ರಮುಖ ಧ್ವನಿಯಾಗಿದ್ದರು. ಜನ ಸಂಘ ಪಕ್ಷ ಕಟ್ಟಿ ಜಮ್ಮು-ಕಾಶ್ಮೀರದಲ್ಲಿನ ಹಿಂದೂಗಳ ಪರವಾಗಿ ಜೀವವನ್ನೇ ತ್ಯಾಗ ಮಾಡಿದ ಮಹಾನ್​ ನಾಯಕ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಡಿ.ಕೋರ್ಡಿಲಪ್ಪ ಬಣ್ಣಿಸಿದರು.Hindus
ತಾಲೂಕಿನ ಬಾದಿಮರಳೂರು ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಶ್ಯಾಮ್​ ಪ್ರಸಾದ್​ ಮುಖರ್ಜಿ ಬಲಿದಾನ ದಿವಸದಲ್ಲಿ ಮಾತನಾಡಿ, ಪ್ರತಿ ಕಾರ್ಯದಲ್ಲೂ ಮಾತಿನಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು. ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರತಿ ಹಂತದಲ್ಲಿಯೂ ಪ್ರಬಲವಾಗಿ ವಿರೋಧಿಸುತ್ತಾ ಬಂದರು. ದೇಶದ ಏಕತೆ ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿ, ಪ್ರತಿಯೊಬ್ಬ ಭಾರತೀಯನಿಗೆ ಅವರ ಮೇಲೆ ಅಪಾರ ಗೌರವ ಮೂಡಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗೌಡ ಮಾತನಾಡಿ, ಮುಖರ್ಜಿ ಅವರು ನೀತಿ, ತತ್ವದ ಆಧಾರದ ಮೇಲೆ ನೆಹರೂ ನೇತೃತ್ವದ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಥಮ ರಾಷ್ಟ್ರ ನಾಯಕ ಶ್ಯಾಮ್​ ಪ್ರಸಾದ್​ ಮುಖರ್ಜಿ. ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ "ಭಾರತೀಯ ಜನಸಂಘ' ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು ಎಂದರು.
ಮಂಡಲ ಎಸ್​ಟಿ ಮೋರ್ಚಾ ಅಧ್ಯಕ್ಷ ಅಶ್ವತ್ಥಪ್ಪ, ಕಾರ್ಯದರ್ಶಿ ರಾಮಾಂಜಿನಪ್ಪ, ಮುಖಂಡರಾದ ಶ್ರೀನಿವಾಸ್​ ಕಲ್ಯಾಣ್​, ಸುರೇಶ್​ ರೆಡ್ಡಿ, ಅನಿಲ್​, ಶ್ರೀನಾಥ್​, ಮಂಜುನಾಥ್​, ಜ್ವಾಲೆಂದ್ರ ಬಾಬು, ಆನೂಡಿ ಶ್ರೀನಿವಾಸ್​, ನವೀನ್​, ರಾಜಣ್ಣ, ನಾರಾಯಣಪ್ಪ, ನರಸಿಂಹಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net