ನಿವಾಸಿಗಳಾದ ಮಾರನರಸಯ್ಯ ಮತ್ತು ರಾಜಣ್ಣ ಸಹೋದರರು ವಾಸವಿದ್ದ ಮನೆಯ ಮೇಲೆ ಮರಬಿದ್ದಿದ್ದರೂ ಯಾವುದೇ ಹಾನಿಯಾಗಿಲ್ಲ. ಆದರೆ ಮನೆ ಬಳಿ ಕಟ್ಟಿದ್ದ ಕುರಿ ಮರಿಯೊಂದು ಮೃತಪಟ್ಟಿದೆ. ಮರದ ಕೊಂಬೆಗಳು ವಿದ್ಯುತ್ ಕಂಬ ಹಾಗೂ ಪಕ್ಕದಲ್ಲಿದ್ದ ಅಡಿಕೆ ತೋಟದಲ್ಲಿ ಬಿದ್ದಿದ್ದು, ಕೆಲ ಅಡಿಕೆ ಮರಗಳು ಮುರಿದಿವೆ. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.