

ಚಿತ್ತಾಪುರ: ಪಟ್ಟಣದಲ್ಲಿ ಏ.20ರಂದು ಅದ್ದೂರಿಯಾಗಿ ಜಗದ್ಗುರು ಬಸವೇಶ್ವರ ಜಯಂತಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪ್ರಜಾಸೌಧ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗ್ಗೆ 8ಕ್ಕೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. 8.30ಕ್ಕೆ ತಹಸಿಲ್ ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಗುವುದು. ಬಳಿಕ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸಬೇಕು. ಜಯಂತಿ ಹಾಗೂ ಮೆರವಣಿಗೆಯಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಲು ಸೂಚಿಸಬೇಕು ಎಂದು ಸಲಹೆ ನೀಡಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಬೆಳಗುಂಪಾ ಮಾತನಾಡಿದರು. ಪ್ರಮುಖರಾದ ಅಶೋಕ ನಿಪ್ಪಾಣಿ, ಅನಿಲ ವಡ್ಡಡಗಿ, ಓಂಕಾರೇಶ್ವರ ರೇಷ್ಮಿ, ವಿಶ್ವಾರಾಧ್ಯ ಪಾಟೀಲ್ ಕರದಾಳ, ಬಸವರಾಜ ಹೂಗಾರ, ಚಂದ್ರಶೇಖರ ಉಟಗುರ, ಬಸವರಾಜ ಕಾಳಗಿ, ಕೋಟೇಶ್ವರ ರೇಷ್ಮಿ, ಬಸವರಾಜ ಸಂಕನೂರ, ರವೀಂದ್ರರೆಡ್ಡಿ ಭಂಕಲಗಿ, ರವೀಂದ್ರ ಇವಣಿ, ರವೀಂದ್ರ ಗೊಬ್ಬೂರ, ರಾಚಪ್ಪ ಬೊಮ್ಮನಗಳ್ಳಿ, ಬಸವರಾಜ ಬೊಮ್ಮನಳ್ಳಿ, ಶರಣು ಸೂಲಹಳ್ಳಿ, ಚಂದ್ರಶೇಖರ ಅಲ್ಲೂರ, ಸಂತೋಷ ಭಂಗಿ, ರಾಜಕುಮಾರ ಮರತೂರಕರ, ಮಹ್ಮದ್ ಅಕ್ರಂ ಪಾಶಾ, ಮಂಜುನಾಥರೆಡ್ಡಿ, ಭಾರತಿ ದಂಡಗುಂಡ, ಆರತಿ ತುಪ್ಪದ್, ಶಶಿಧರ ಬಿರಾದಾರ, ಡಾ.ಶಂಕರ ಕಣ್ಣಿ, ಪಂಡಿತ ಸಿಂಧೆ ಇತರರಿದ್ದರು.