

ಯಡಿಯೂರಪ್ಪ ಅವರ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆರಿತ್ತು. 47 ಸದಸ್ಯ ಬಲವನ್ನು ಹೊಂದಿದ್ದ ಗ್ರಾಪಂ ಅತಿ ದೊಡ್ಡ ಪಂಚಾಯಿತಿಯಾಗಿತ್ತು. 11 ವರ್ಷದ ನಂತರ ನಡೆದ ಪಪಂ ಚುನಾವಣೆಯಲ್ಲಿ 19 ವಾರ್ಡ್ಗಳಲ್ಲಿ 14 ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಒಂದು ಕಡೆ ಜೆಡಿಎಸ್ಗೆ ಬೆಂಬಲ ನೀಡಲಾಗಿತ್ತು. ಅದರಲ್ಲೂ ಗೆಲವು ಕಂಡಿದ್ದೇವೆ. ನಗರಸಭೆ ಉಪ ಚುನಾವಣೆಯಾದ ಹೇಮಾವತಿ ಪೇಟೆ ವಾರ್ಡ್ನಲ್ಲೂ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಕಂಡಿದ್ದಾರೆ.