_1786928692702.webp?w=480&auto=format%2Ccompress&fit=max)
_1786928692702.webp?w=480&auto=format%2Ccompress&fit=max)
ಮೈಸೂರು: ಅರ್ಧ ಶತಮಾನವೆಂದರೆ 50 ವರ್ಷಗಳ ಕಾಲಾವಧಿಯಷ್ಟೇ ಅಲ್ಲ. ಅದು ಕನಸು, ಪರಿಶ್ರಮ, ನಂಬಿಕೆ, ಸವಾಲು ಮೆಟ್ಟಿ ನಿಂತ ಛಲ ಹಾಗೂ ಸಾವಿರಾರು ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಾರ್ಥಕ ಪಯಣ. ಇಂತಹ ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ "ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್' ಸುವರ್ಣ ಮಹೋತ್ಸವ ಸಂಭ್ರಮವನ್ನು ಶನಿವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿತು.
ಐದು ದಶಕಗಳ ಹಿಂದೆ ಆರಂಭವಾದ ಒಂದು ಕನಸು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತ ಹೆಮ್ಮೆಯ ಪಯಣವನ್ನು ಜನಪ್ರತಿನಿಧಿಗಳು, ವಿಆರ್ಎಲ್ನ ಗ್ರಾಹಕರು, ಹಿತೈಷಿಗಳು, ವಿಜಯವಾಣಿ ಓದುಗರು ಹಾಗೂ ಜಾಹೀರಾತುದಾರರು ಕಣ್ತುಂಬಿಕೊಂಡರು.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ,
ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ನ
ಎಂಡಿ ಶಿವ ಸಂಕೇಶ್ವರ ಅವರನ್ನು ಅಭಿನಂದಿಸಿ, ಸಂಸ್ಥೆಯ ಮುಂದಿನ ಪಯಣವೂ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಡಾ. ಆನಂದ ಸಂಕೇಶ್ವರ, ಲಾಜಿಸ್ಟಿಕ್ಸ್ ಕಂಪನಿ ನಡೆಸುವುದು ಅತ್ಯಂತ ಸವಾಲಿನ ವಿಚಾರ. ಟೆಲಿಫೋನ್ ಕೂಡ ಸರಿಯಾಗಿ ಸಿಗದ ಆ ದಿನಗಳಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಮನೆ ಮನೆ ಪ್ರಚಾರ ಮಾಡಿದ ಉದಾಹರಣೆಗಳಿವೆ. ಇವತ್ತಿನ ಸ್ಮಾರ್ಟ್ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ ನನ್ನ ತಂದೆ ಈ ಸಂಸ್ಥೆ ಪ್ರಾರಂಭಿಸಿದಾಗ ಇಂತಹ ಯಾವುದೇ ವ್ಯವಸ್ಥೆ ಇಲ್ಲದೆಯೂ ಅವರು ವಿಆರ್ಎಲ್ ಅನ್ನು ಯಶಸ್ವಿಯಾಗಿ ಕಟ್ಟಿದರು ಎಂದು
ಡಾ.ವಿಜಯ ಸಂಕೇಶ್ವರ ಅವರ ಸಾಧನೆಯನ್ನು ಸ್ಮರಿಸಿದರು. ನಮ್ಮ ಸಂಸ್ಥೆಯ ಯಶಸ್ಸಿಗೆ ಆರ್ಥಿಕ ಶಿಸ್ತು ಪ್ರಮುಖ ಕಾರಣ. 50 ವರ್ಷಗಳ ಇತಿಹಾಸದಲ್ಲಿ ನಮ್ಮ ಸಂಸ್ಥೆಯ ಒಂದೇ ಒಂದು ಚೆಕ್ ಬೌನ್ಸ್ ಪ್ರಕರಣ ಇಲ್ಲ. ಸಿಬ್ಬಂದಿ ವರ್ಗದ ಪರಿಶ್ರಮ, ನಮ್ಮ ಗ್ರಾಹಕರ ಬೆಂಬಲ ಸಂಸ್ಥೆಯ ಬೆಳವಣಿಗೆಗೆ ಕಾರಣ. ದೇಶದ ಟಾಪ್ 10 ಲಾಜಿಸ್ಟಿಕ್ಗಳಲ್ಲಿ 10ರಿಂದ 20 ಸಾವಿರ ಗ್ರಾಹಕರಿದ್ದರೆ ನಮ್ಮಲ್ಲಿ 10 ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ಸೇವೆ ವಿಸ್ತರಿಸಿದೆ ಎಂದು ಹೇಳಿದರು. ವಿಜಯಾನಂದ ಟ್ರಾವೆಲ್ಸ್ನ
550 ಬಸ್ಗಳು 8 ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದ್ದು, 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ನಮ್ಮ ಬಸ್ನಲ್ಲಿ ಒಬ್ಬರೇ ಮಹಿಳಾ ಪ್ರಯಾಣಿಕರು ಇದ್ದರೆ ಪಕ್ಕದ ಸೀಟ್ ಮಹಿಳೆಯರಿಗೇ ಮೀಸಲಾಗಿರುತ್ತದೆ. ಒಂದು ವೇಳೆ ಮತ್ತೊಬ್ಬ ಮಹಿಳಾ ಪ್ರಯಾಣಿಕರು ಇರದಿದ್ದರೆ ಆ ಸೀಟನ್ನು ಖಾಲಿ ಬಿಡುತ್ತೇವೆ. ಈ ವ್ಯವಸ್ಥೆಯನ್ನು ಆರಂಭದಿಂದಲೂ ರೂಢಿಸಿಕೊಂಡಿದ್ದೇವೆ ಎಂದರು.
ವಿಭಿನ್ನ ಆಲೋಚನೆಯ ಫಲ
ವಿಆರ್ಎಲ್ ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದ ಡಾ.ವಿಜಯ ಸಂಕೇಶ್ವರ ಅವರು, "ನನ್ನ ತಂದೆ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಮುಂದುವರಿಯುವ ಬದಲು, ವಿಭಿನ್ನ ಕ್ಷೇತ್ರದಲ್ಲಿ ಹೆಜ್ಜೆ ಇಡಬೇಕು ಎಂಬ ಆಲೋಚನೆಯಿಂದ ವಿಆರ್ಎಲ್ ಸಂಸ್ಥೆಯನ್ನು ಆರಂಭಿಸಲಾಯಿತು' ಎಂದು ಹೇಳಿದರು. ವಿಆರ್ಎಲ್ ಆರಂಭಿಸಿದ ಬಳಿಕ 10 ವರ್ಷಗಳ ಕಾಲ ನಿರಂತರ ನಷ್ಟ ಹಾಗೂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೆ, ಆ ಸಂಕಷ್ಟದ ದಿನಗಳಲ್ಲಿಯೂ ಸೇವೆಯ ಗುಣಮಟ್ಟ ಹಾಗೂ ಆರ್ಥಿಕ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯವೈಖರಿಯನ್ನು ಜನರು ಗುರುತಿಸಿ, ವಿಶ್ವಾಸವಿಟ್ಟು ಆಶೀರ್ವದಿಸಿದರು. ಅವರ ಬೆಂಬಲವೇ ನಮಗೆ ಬೆನ್ನುತಟ್ಟಿ ಮುನ್ನಡೆಯುವ ಶಕ್ತಿ ನೀಡಿತು ಎಂದು ಸಂಸ್ಥೆಯ ಸುದೀರ್ಘ ಪಯಣವನ್ನು ಸ್ಮರಿಸಿದರು. ಮೊದಲು ಹುಬ್ಬಳ್ಳಿ, ಗದಗಕ್ಕೆ ಸೀಮಿತವಾಗಿದ್ದ ವಿಜಯಾನಂದ ರೋಡ್ ಲೈನ್ಸ್ ಸಂಸ್ಥೆ ನಂತರ ಗ್ರಾಹಕರು ಹಾಗೂ ಹಣಕಾಸು ಸಂಸ್ಥೆಗಳ ಸಹಕಾರದೊಂದಿಗೆ ಈ ಮಟ್ಟಕ್ಕೆ ಬೆಳೆದಿದೆ. 15 ವರ್ಷಗಳಿಂದ ಈ ಸಂಸ್ಥೆಯನ್ನು ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಆಗಿ ಮಾಡಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದೆವು. ಷೇರು ಮಾರುಕಟ್ಟೆಯಲ್ಲಿ ಘೋಷಣೆಯ ಬೆಲೆಗಿಂತ ಶೇ.74 ಪಟ್ಟು ಹೆಚ್ಚು ಬೆಲೆಗೆ ಗ್ರಾಹಕರು ಷೇರುಗಳನ್ನು ಖರೀದಿಸಿದರು. ಇದು ಕಂಪನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದರು. ದೇಶದಲ್ಲಿಯೇ ಅತಿಹೆಚ್ಚು ವಾಹನಗಳನ್ನು ಹೊಂದಿರುವ ಸಂಸ್ಥೆ ನಮ್ಮದಾಗಿದೆ. ಟ್ರಕ್ ಹಾಗೂ ಬಸ್ ಸೇರಿ 7000 ವಾಹನಗಳಿವೆ. ದೇಶದಲ್ಲಿ 1300 ಶಾಖೆಗಳು, ಶ್ರೀನಗರದಿಂದ ತಿರುವನಂತಪುರಂವರೆಗೆ ನಮ್ಮ ಸೇವೆ ವಿಸ್ತರಿಸಿದೆ. ಇದು ಸಾಧ್ಯವಾಗಿದ್ದು ನಮ್ಮ ಸಮರ್ಪಣಾ ಮನೋಭಾವದಿಂದ. ಕೆಲಸ ಮಾಡುವ ಸಿಬ್ಬಂದಿಯ ಸೇವೆಯಿಂದ. 23 ಸಾವಿರ ಸಿಬ್ಬಂದಿ ವಿಆರ್ಎಲ್ನಲ್ಲಿ, 3 ಸಾವಿರ ಸಿಬ್ಬಂದಿ ವಿಜಯಾನಂದ ಟ್ರಾವೆಲ್ಸ್ನಲ್ಲಿ, 2,500 ಸಿಬ್ಬಂದಿ ವಿಜಯವಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕೋದ್ಯಮಕ್ಕೆ ಹೊಸ ಸ್ವರೂಪ
ಕನ್ನಡ ಪತ್ರಿಕೋದ್ಯಮ ಒಂದು ಕಾಲದಲ್ಲಿ ನಿಂತ ನೀರಾಗಿತ್ತು. ಅದಕ್ಕೊಂದು ಹೊಸ ಸ್ವರೂಪ ನೀಡಲು ವಿಜಯ ಕರ್ನಾಟಕ ಪ್ರಾರಂಭಿಸಿದೆವು. ಓದುಗರ ಆಶೀರ್ವಾದದಿಂದ ವಿಜಯ ಕರ್ನಾಟಕ ಕೇವಲ ಒಂದೇ ವರ್ಷದಲ್ಲಿ ನಾಡಿನ ನಂ.1 ಪತ್ರಿಕೆಯಾಯಿತು. ವಿವಿಧ ಕಾರಣಗಳಿಂದ ಅದನ್ನು ಟೈಮ್ಸ್ ಗ್ರೂಪ್ಗೆ ಹಸ್ತಾಂತರಿಸಲಾಯಿತು. ಆ ನಂತರ "ವಿಜಯವಾಣಿ' ಪ್ರಾರಂಭಿಸಿದೆವು. 12 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದೇವೆ. ಈ ಯಶಸ್ಸಿನಲ್ಲಿ ನನ್ನ ಮಗ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
ಡಾ. ಆನಂದ ಸಂಕೇಶ್ವರ ಅವರ ಕೊಡುಗೆ ದೊಡ್ಡದು. 13, 14 ವರ್ಷ ಇರುವಾಗಲೇ ಡಾ.ಆನಂದ ಸಂಕೇಶ್ವರ ಕಂಪನಿಯ ಕೆಲಸ ಮಾಡಲು ಪ್ರಾರಂಭಿಸಿದರು. ಅದೇ ರೀತಿ ಈಗ ಮೊಮ್ಮಗ
ಶಿವ ಸಂಕೇಶ್ವರ ಸಂಸ್ಥೆಯ ಏಳಿಗೆಗೆ ದುಡಿಯುತ್ತಿದ್ದಾರೆ. ಅದೇ ರೀತಿ ಸಂಸ್ಥೆಯ ಏಳಿಗೆಗೆ ಲಲಿತಾ ಸಂಕೇಶ್ವರ ಅವರೂ ಕಾರಣ ಎಂದು ಡಾ.ವಿಜಯ ಸಂಕೇಶ್ವರ ಅವರು ಸ್ಮರಿಸಿದರು.
ನವೋದ್ಯಮ ಆರಂಭಕ್ಕೆ
ವಿಆರ್ಎಲ್ ಮಾದರಿ
ಐವತ್ತು ವರ್ಷ ಎಂಬುದು ಸಣ್ಣ ಮೈಲಿಗಲ್ಲೇನೂ ಅಲ್ಲ. ವಿಆರ್ಎಲ್ ಸಂಸ್ಥೆ 50 ವರ್ಷಗಳನ್ನು ಪೂರೈಸಿರುವುದು ಸಂತಸದ ವಿಚಾರ. ವಿಆರ್ಎಲ್ನ ಒಂದು ಟ್ರಕ್ ನೋಡಿದಾಗ ನಮಗೆ ವಿಶ್ವಾಸ ಮೂಡುತ್ತದೆ. ಅದಕ್ಕಾಗಿ ನಾವು ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕಾಲಕ್ಕೆ ತಕ್ಕ ಹಾಗೆ ವಿಆರ್ಎಲ್ ಸಂಸ್ಥೆ ಹೊಂದಿಕೊಂಡು ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ. ಪ್ರಸ್ತುತ ಎಲ್ಲರೂ ನವೋದ್ಯಮ ಪ್ರಾರಂಭಿಸುತ್ತಿದ್ದಾರೆ. ನವೋದ್ಯಮ ಪ್ರಾರಂಭಿಸಲು
ಎಲ್ಲರಿಗೂ ಹೆಮ್ಮೆಯ ಸಂಗತಿ
ಹಣದ ಕೊರತೆ ನಡುವೆಯೂ ಡಾ. ವಿಜಯ ಸಂಕೇಶ್ವರ
ಅವರು ಉದ್ಯಮ ಪ್ರಾರಂಭಿಸಿ ದೇಶದಲ್ಲಿ ನಂ.1 ಲಾಜಿಸ್ಟಿಕ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಸಾಮಾನ್ಯವಾದ ಮಾತಲ್ಲ. ವೃತ್ತಿಪರತೆ ಹಾಗೂ ಆರ್ಥಿಕ ಶಿಸ್ತು ಮೈಗೂಡಿಸಿಕೊಂಡವರಿಗೆ ಮಾತ್ರ ಇಂತಹ ಸಾಧನೆ ತೋರಲು ಸಾಧ್ಯ. ಕನ್ನಡಿಗರಾದ ಡಾ. ವಿಜಯ ಸಂಕೇಶ್ವರ ಅವರು ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರು
ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಟಿ.ಎಸ್. ಶ್ರೀವತ್ಸ, ಕೆ. ರವಿಶಂಕರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಸ್.ಎ. ರಾಮದಾಸ್, ಎಂ.ಕೆ. ಸೋಮಶೇಖರ್, ಎಲ್. ನಾಗೇಂದ್ರ, ನಿರಂಜನ್ ಕುಮಾರ್, ಎಂಎಲ್ಸಿಗಳಾದ ಗೋ.ಮಧುಸೂದನ್, ತೋಂಟದಾರ್ಯ, ಮಾಜಿ ಮೇಯರ್ ಶಿವಕುಮಾರ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲಿಂಗರಾಜು, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮಾಜಿ ಸಿಂಡಿಕೇಟ್ ಸದಸ್ಯ ನಿಂಗರಾಜ್ ಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಸಣ್ಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಮುಲ್ ಅಧ್ಯಕ್ಷ ಅಶೋಕ್, ಉದ್ಯಮಿ ಛಾಯಾ ನಂಜಪ್ಪ, ಯೋಗಗುರು ಶ್ರೀಹರಿ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಭೈರಿ, ಬಿಜೆಪಿ ಮುಖಂಡ ಡಾ.ಶುಶ್ರುತ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ್, ಹಿರಿಯ ಪತ್ರಕರ್ತ ರವೀಂದ್ರ ಜೋಶಿ, ಉರಗ ತಜ್ಞ ಸ್ನೇಕ್ ಶ್ಯಾಂ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಓಂದೇವ್ ಇತರರು ಇದ್ದರು.