ಆನೇಕಲ್ನ ಖಾಸಗಿ ಕಾಲೇಜು ಬಳಿ ಕೊಕೇನ್ ಮಾರುತ್ತಿದ್ದ ವಿದೇಶಿ ಮಹಿಳೆ ಬಂಧನದ ವಿಷಯವನ್ನು ಪಟ್ಟಣ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಬಹಿರಂಗಪಡಿಸಿದರು. ಡಿವೈಎಸ್ಪಿ ಗೋಪಾಲ್ ನಾಯಕ್, ವೃತ್ತ ನಿರೀಕ್ಷಕರಾದ ಚಂದ್ರಪ್ಪ, ನವೀನ್, ಮಂಜುನಾಥ್, ಕೆಂಪೇಗೌಡ, ಮಹೇಂದ್ರ ಇದ್ದರು.
Published on:
Copied
Follow Us
ಆನೇಕಲ್ : ಖಾಸಗಿ ಕಾಲೇಜಿನ ಎದುರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಮಹಿಳೆಯನ್ನು ಬಂಧಿಸಿರುವ ಆನೇಕಲ್ ಪೊಲೀಸರು, 18 ಲಕ್ಷ ರೂ. ಮೌಲ್ಯದ 180 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಬ್ಲೆಸ್ಸಿಂಗ್ ಒಪುಟಾ(34) ಬಂಧಿತೆ. ಈಕೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಇನ್ಸ್ಪೆಕ್ಟರ್ ಆರ್.ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ, ವಶಕ್ಕೆ ಪಡೆಯಿತು.
ಕಾಲೇಜು ಬಳಿ ಇತ್ತೀಚೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಕಾಲೇಜು ಅಕ್ಕ ಪಕ್ಕ ಪೊಲೀಸರು ಕಣ್ಣಿಟ್ಟಿದ್ದರು. ಸಬ್ ಇನ್ಸ್ಪೆಕ್ಟರ್ ಸಿದ್ದನಗೌಡ ಪರಿಶೀಲನೆ ನಡೆಸುತ್ತಿದ್ದಾಗ ಈಕೆ ಕಾಲೇಜು ಪಕ್ಕದಲ್ಲಿ ಮಾರಾಟ ಮಾಡಲು ತಂದಿದ್ದ ಮಾದಕ ವಸ್ತು ಸಮೇತ ಬಂಧಿಸಲಾಯಿತು.
ಈಕೆ ತಿರುಮಶೆಟ್ಟಿಹಳ್ಳಿ ಬಳಿ ವಾಸವಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆನೇಕಲ್ ಪೊಲೀಸರು, ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ನೇತೃತ್ವದಲ್ಲಿ ಚರ್ಚಿಸಿದ್ದಾರೆ, ಆನೇಕಲ್ಠಾಣೆಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸೂರ್ಯನಗರ ಠಾಣೆ ಸಿಪಿಐ ಎಸ್.ಎಂ.ಚಂದ್ರಪ್ಪ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ.
ತನಿಖಾ ತಂಡದಲ್ಲಿ ಆನೇಕಲ್ ಠಾಣೆ ಸಬ್ಇನ್ಸ್ಪೆಕ್ಟರ್ ಸಿದ್ದನಗೌಡ, ಪಿಎಸ್ಐ ಮುನಿರತ್ನ, ಅಪರಾಧ ವಿಭಾಗದ ಸಿಬ್ಬಂದಿ ಭಾನುಪ್ರಿಯ, ಸುರೇಶ್, ಭಾಸ್ಕರ, ಅನಿಲ್ ಇದ್ದರು. ಕಾರ್ಯಾಚರಣೆ ಮಾಡಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗಿದೆ.