ಹಿಂದೂ ಸಂಸತಿ ಬಿಂಬಿಸುವ ಉತ್ಸವ ಅವಶ್ಯ

ಸೇಡಂನಲ್ಲಿ ರಾಮೋತ್ಸವದ ಕಾರ್ಯ ಚಟುವಟಿಕೆಗೆ ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ವಸಂತ ಪಾಟೀಲ್​, ರಾಜು ಅವಂಟಿ, ಶರಣು ತವಧಿ, ಬಸವರಾಜ ಬಂಡಾ, ಮೋಹನಕುಮಾರ, ಆನಂದ ಇದ್ದರು.
ಸೇಡಂನಲ್ಲಿ ರಾಮೋತ್ಸವದ ಕಾರ್ಯ ಚಟುವಟಿಕೆಗೆ ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ವಸಂತ ಪಾಟೀಲ್​, ರಾಜು ಅವಂಟಿ, ಶರಣು ತವಧಿ, ಬಸವರಾಜ ಬಂಡಾ, ಮೋಹನಕುಮಾರ, ಆನಂದ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವಶಂಕರ ಶಿವಾಚಾರ್ಯರು ನುಡಿ
  • ಸೇಡಂನಲ್ಲಿ 28ಕ್ಕೆ ರಾಮೋತ್ಸವ
ಸೇಡಂ : ಹಿಂದೂ ಧರ್ಮ ತನ್ನದೇ ಇತಿಹಾಸ ಹೊಂದಿದ್ದು, ದಿನ ಕಳೆದಂತೆ ನಮ್ಮ ಆಚರಣೆ, ವಿಚಾರಗಳನ್ನು ಮರೆಯುತ್ತಿದ್ದೇವೆ. ನಮ್ಮ ಸಂಸತಿ ಬಿಂಬಿಸುವ ಉತ್ಸವ ಇಂದಿನ ದಿನಗಳಲ್ಲಿ ಅವಶ್ಯವಾಗಿದೆ ಎಂದು ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಹೇಳಿದರು.
ಚೌರಸ್ತಾ ಹತ್ತಿರ ಮಾ.28ರಂದು ನಡೆಯಲಿರುವ ರಾಮೋತ್ಸವದ ಕಾರ್ಯಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಸನಾತನ ಹಿಂದೂ ದರ್ಮದ ರಕ್ಷಣೆಗೆ ಸಂಟನೆ ಅವಶ್ಯ. ಇಂತಹ ಉತ್ಸವಗಳ ನೆಪದಲ್ಲಿ ನಾವೆಲ್ಲರೂ ಸೇರಲು ಸಾಧ್ಯವಾಗಲಿದೆ. ಹೀಗಾಗಿ ಸಮಾಜದ ಪ್ರತಿಯೊಬ್ಬರೂ ಧರ್ಮದ ವಿಚಾರ ಬಂದಾಗ ರಾಜಕೀಯ, ಪಕ್ಷ, ಜಾತಿ ಭೇದ ಮರೆತು ಒಂದಾಗಿ ಮುನ್ನುಗ್ಗಬೇಕು ಎಂದರು.
ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಯುವಕರೆಲ್ಲರೂ ಸೇರಿಕೊಂಡು ಕಳೆದ ನಾಲ್ಕೆದು ವರ್ಷಗಳಿಂದ ಅದ್ದೂರಿಯಾಗಿ ರಾಮೋತ್ಸವ ಮಾಡಿಕೊಂಡು ಬರುತ್ತಿರುವುದು ಶ್ಲಾನೀಯ. ಈ ಭಾರಿ ವಸಂತ ಪಾಟೀಲ್​ ಅವರ ನೇತೃತ್ವದ ಯುವಕರ ತಂಡ ಸಂಟಿತವಾಗಿ ಉತ್ಸವದ ತಯಾರಿ ನಡೆಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಸೇರುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ವಸಂತ ಪಾಟೀಲ್​, ಪ್ರಮುಖರಾದ ಶಿವಕುಮಾರ ಹಿರೇಮಠ, ಶರಣು ತವಧಿ, ರಾಜು ಅವಂಟಿ, ಅನಂತರೆಡ್ಡಿ ಪಾಟೀಲ್​, ಮೋಹನಕುಮಾರ, ಬಸವರಾಜ ಬಂಡಾ, ಆನಂದ ಪವಾರ, ನರೇಂದ್ರ ರುದ್ನೂರ, ಸಂಗಮೇಶ ಇಂಜಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net