ಸಿನಿಮಾ ಯಶಸ್ಸಿಗೆ ನಾಟಕ ಆಧಾರಿತ ಕಥೆ ಸೂಕ್ತ

ಮಳಖೇಡ ಸಮೀಪದ ಮಲಕೂಡ ಗ್ರಾಮದಲ್ಲಿ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ರಚನೆಯ ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ನಾಟಕ ಆಧಾರಿತ ಚಲನಚಿತ್ರದ ಕ್ಯಾಮರಾ ಪೂಜೆಯನ್ನು ಶ್ರೀ ಗುರುಲಿಂಗ ಶಿವಾಚಾರ್ಯರು ನೆರವೇರಿಸಿದರು. ನಿರ್ದೇಶಕ ಯುವರಾಜ ಗುತ್ತೇದಾರ್​, ಶಿವಕುಮಾರ ನಿಡಗುಂದಾ, ಸೋಮಶೇಖರ ಐನಾಪುರ ಇತರರಿದ್ದರು
ಮಳಖೇಡ ಸಮೀಪದ ಮಲಕೂಡ ಗ್ರಾಮದಲ್ಲಿ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ರಚನೆಯ ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ನಾಟಕ ಆಧಾರಿತ ಚಲನಚಿತ್ರದ ಕ್ಯಾಮರಾ ಪೂಜೆಯನ್ನು ಶ್ರೀ ಗುರುಲಿಂಗ ಶಿವಾಚಾರ್ಯರು ನೆರವೇರಿಸಿದರು. ನಿರ್ದೇಶಕ ಯುವರಾಜ ಗುತ್ತೇದಾರ್​, ಶಿವಕುಮಾರ ನಿಡಗುಂದಾ, ಸೋಮಶೇಖರ ಐನಾಪುರ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಲಿಂಗ ಶಿವಾಚಾರ್ಯ ನುಡಿ
  • ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ನಾಟಕ ಚಲನಚಿತ್ರವಾಗಿ ತೆರೆಗೆ ಬರಲು ಸಿದ್ಧತೆ
ಮಳಖೇಡ: ನಾಟಕ ಅಥವಾ ಕಾದಂಬರಿ ಆಧಾರಿತ ಕಥೆಗಳಿದ್ದರೆ ಚಲನಚಿತ್ರಗಳು ಯಶಸ್ವಿಯಾಗಬಲ್ಲವು ಎಂದು ಮಲಕೂಡ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ನುಡಿದರು.
ಮಲಕೂಡ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸತ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ರಚಿಸಿದ ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ಚಲನಚಿತ್ರದ ಕ್ಯಾಮರಾ ಪೂಜೆ ನೆರವೇರಿಸಿ ಮಾತನಾಡಿದ ಅವರು,ಉತ್ತರ ಕರ್ನಾಟಕ ಭಾಗದ ನಾಟಕಕಾರರು, ಕಥೆಗಾರರ ಕಥೆಗಳನ್ನು ಗುರುತಿಸಿ ಚಲನಚಿತ್ರ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯ.ಇದರಿಂದ ಈ ಭಾಗದ ಕವಿ, ಕಲಾವಿದರಿಗೆ ಉತ್ತೇಜನ ನೀಡಿದಂತಾಗಲಿದೆ. ಗ್ರಾಮೀಣ ಪ್ರತಿಭೆಗಳು ತಮ್ಮ ಕಲಾಕೌಶಲ ಅನಾವರಣಗೊಳಿಸಲು ಇದೊಂದು ಸದಾವಕಾಶ. ಚಲನಚಿತ್ರ ಯಶಸ್ವಿಯಾಗಿ ಮೂಡಿಬರಲಿ ಎಂದು ಹಾರೈಸಿದರು.
ಚಲನಚಿತ್ರ ನಿರ್ದೇಶಕ ಯುವರಾಜ ಗುತ್ತೇದಾರ್​ ಮಾತನಾಡಿ, ಭಾವನಾತ್ಮಕ ಸಂಬಂಧಗಳ ಸರಮಾಲೆ ಹೊತ್ತ ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ಕಥೆ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅದನ್ನು ಚಲನಚಿತ್ರವಾಗಿ ಮಾಡಲು ಹಾಗೂ ಈ ಭಾಗದ ಕಲಾವಿದರ ಪ್ರತಿಭೆ ಹೊರತರುವಂಥ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಶೂಟಿಂಗ್​ ಸಂಪೂರ್ಣ ಗ್ರಾಮೀಣ ಪ್ರದೇಶದಲ್ಲಿ ನಡೆಯಲಿದ್ದು, ಮನೆ ಮಂದಿ ನೋಡುವಂತಹ ಸಿನಿಮಾ ತೆರೆಗೆ ಬರಲಿದೆ ಎಂದರು.
ಚಿತ್ರ ಕಥೆಗಾರ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ, ಸಹ ನಿರ್ದೇಶಕ ಶಿವಕುಮಾರ ನಿಡಗುಂದಾ, ನಿರ್ಮಾಪಕರಾದ ಸೋಮಶೇಖರ ಐನಾಪುರ, ರಾಜಶೇಖರ ಕುಂಬಾರ, ಕಲಾವಿದರಾದ ಅಣ್ಣಾರಾವ ನೂರಂದಗೌಡ, ಬಾಬು ಕಾಶಿ, ವೀರೇಶ ಕರದಾಳ, ವಿಶ್ವರಾಧ್ಯ ಕುಂಬಾರ, ವೀರೇಶ ಶಾಸಿ, ಕೇದಾರನಾಥ ಪಟೇದ, ಶಂಕರ ಐನಾಪುರ, ಶ್ರೀಕಾಂತ ಬೆಚ್ಚೆಟ್ಟಿ, ರೇವಣಸಿದ್ದಪ್ಪ ಕುಂಬಾರ, ದಶರಥ ಗೋದಿ, ಭೀಮರಾಯ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net