ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ರಾಜಣ್ಣ, ಇವತ್ತು ಕೇರಳದಲ್ಲಿ ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ನಿರ್ಣಯವಾಗಬಹುದು. ಹೈಕಮಾಂಡ್ ಜತೆ ತುಂಬಾ ಹೊತ್ತು ಸಿಎಂ ಸಮಯ ಕಳೆಯುವುದರಿಂದ ಈ ವೇಳೆ ನಾಯಕತ್ವದ ಬಗ್ಗೆ ತೀರ್ಮಾನ ಆಗಬಹುದು, ಸಿದ್ದರಾಮಯ್ಯನವರೇ ಮುಂದುವರಿಯಲಿ ಎನ್ನುವುದು ನನ್ನ ಅಭಿಪ್ರಾಯವಾಗಿದ್ದು, ಒಂದು ವೇಳೆ ಬದಲಾವಣೆ ಆದರೆ, ಜಿ ಪರಮೇಶ್ವರ್ ಆ ಸ್ಥಾನಕ್ಕೆ ಸೂಕ್ತ ಎಂದರು.