ಪ್ರಕರಣದ ಹಿನ್ನೆಲೆ: ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ದಾವೆ ಹೂಡಿದ್ದ ಶೈಲಾ ಮತ್ತು ರಾಘವೇಂದ್ರ ದಂಪತಿಗಳ ನಡುವಿನ ಮನಸ್ತಾಪವನ್ನು ನ್ಯಾಯಾಧೀಶರು ಹಾಗೂ ವಕೀಲರು ತಿಳಿಹೇಳುವಲ್ಲಿ ಯಶಸ್ವಿಯಾದರು. ನ್ಯಾಯಾಧೀಶ ಸತೀಶ್ ಅವರು ದಂಪತಿಗಳಿಗೆ ತಿಳಿವಳಿಕೆ ನೀಡಿ, ಪರಸ್ಪರ ಒಪ್ಪಿಗೆಯ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.