ಇನ್ನೂ ಸಿಗದ ನಾಪತ್ತೆಯಾದವನ ಸುಳಿವು / DABASPETE

ದಾಬಸ್​ಪೇಟೆ ಶಿವಗಂಗೆ
ದಾಬಸ್​ಪೇಟೆ ಶಿವಗಂಗೆ
Published on

ದಾಬಸ್​ಪೇಟೆ :

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್​ ಬಂದು ನಾಪತ್ತೆಯಾದ ಯುವಕನ ಸುಳಿವು ಭಾನುವಾರವೂ ಸಿಕ್ಕಿಲ್ಲ.

ಮಳೆ ಕಾರಣಕ್ಕೆ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಮತ್ತೆ ಮುಂದುವರಿಯಲಿದೆ.

ಬೆಂಗಳೂರಿನ ವೈಟ್​ಫೀಲ್ಡ್​ ನಿವಾಸಿ ಅದ್ವೆ$$ೃತ್​ ಉಪಾಧ್ಯಾಯ ಶುಕ್ರವಾರವೇ ನಾಪತ್ತೆಯಾಗಿದ್ದು, ಶನಿವಾರ ಹಾಗೂ ಭಾನುವಾರ ಎರಡೂ ದಿನಗಳಿಂದ ಎನ್​ಡಿಆರ್​ಎ್​, ಪೊಲೀಸ್​, ಅರಣ್ಯ ಇಲಾಖೆ ಸಿಬ್ಬಂದಿ, ಶ್ವಾನದಳ ಪರಿಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ.

ಕಡಿದಾದ ಪ್ರದೇಶಗಳಲ್ಲಿ ಶೋಧ ನಡೆಸುವುದು ಕಷ್ಟವಾಗಿರುವುದರಿಂದ ಪೊಲೀಸರು ಡ್ರೋನ್​ ಕ್ಯಾಮರಾ ನೆರವು ಪಡೆದುಕೊಂಡಿದ್ದಾರೆ. ಭಾನುವಾರ ಬೆಟ್ಟದ ವಿವಿಧ ಭಾಗಗಳಲ್ಲಿ ಡ್ರೋನ್​ ಮೂಲಕ ಪರಿಶೀಲನೆ ನಡೆಸಲಾಗಿದೆ. ಎನ್​ಡಿಆರ್​ರ್​ ಶ್ರೀಧರ್​ ನೇತೃತ್ವದಲ್ಲಿ 20 ಸಿಬ್ಬಂದಿ, ಪೊಲೀಸ್​ ನಿರೀಕ ಭರತ್​ ಗೌಡ ನೇತೃತ್ವದಲ್ಲಿ 20 ಸಿಬ್ಬಂದಿ, ನೆಲಮಂಗಲ ಉಪ ವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ್​ ನೇತೃತ್ವದಲ್ಲಿ 20 ಸಿಬ್ಬಂದಿ ಜತೆಗೆ ಪೊಲೀಸ್​ ಶ್ವಾನದಳ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮೊಬೈಲ್​ನ ಕೊನೆಯ ಲೊಕೇಶನ್​, ಸಿಸಿ ಕ್ಯಾಮರಾ ದೃಶ್ಯಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗೋಬಿ ತಿನ್ನುತ್ತ ನಿಂತಿದ್ದ ಯುವಕನಿಗೆ ಚಾಕು ಇರಿತ

ಚಂದಾಪುರದ ಬನಹಳ್ಳಿ ರಸ್ತೆಯಲ್ಲಿ ಸ್ನೇಹಿತರ ಜತೆ ಗೋಬಿ ತಿನ್ನುತ್ತ ನಿಂತಿದ್ದ ಯುವಕನಿಗೆ ಅಪರಿಚಿತರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ರಾಮಕೃಷ್ಣಾಪುರದ ಅರ್ಜುನ್​(20) ಹಲ್ಲೆಗೆ ಒಳಗಾದವ.

ಶನಿವಾರ ರಾತ್ರಿ ಬನಹಳ್ಳಿ ರಸ್ತೆ ಬದಿ ಸ್ನೇಹಿತರೊಂದಿಗೆ ಅರ್ಜುನ್​ ಗೋಬಿ ತಿನ್ನುತ್ತ ನಿಂತಿದ್ದ. ಈ ವೇಳೆ ಬೈಕ್​ನಲ್ಲಿ ಬಂದ ಅಪರಿಚಿತರು ನೀವು ಲಂಬಾಣಿನಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅರ್ಜುನ್​ ಮತ್ತು ಆತನ ಸ್ನೇಹಿತರು ಹೌದು., ನಾವು ಲಂಬಾಣಿಗರು ಎಂದು ಲಂಬಾಣಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಷ್ಟಕ್ಕೆ ಅಪರಿಚಿತರು ಕಿರಿಕ್​ ತೆಗೆದಿದ್ದಲ್ಲದೇ ಏಕಾಏಕಿ ಚಾಕು ಹೊರತೆಗೆದು ಅರ್ಜುನ್​ ಮೇಲೆ ದಾಳಿ ಮಾಡಿ, ಪರಾರಿಯಾಗಿದ್ದಾರೆ. ಅರ್ಜುನ್​ ಗಂಭೀರವಾಗಿ ಗಾಯಗೊಂಡಿದ್ದು,ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಸೂರ್ಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net