ರೈತರಿಗೆ ಶೇ.೯೭ ರಷ್ಟು ಬಿಲ್ ಪಾವತಿ

 ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸಕ್ಕರೆ ಕಾರ್ಖಾನೆ ಮಾಲಿಕರ, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಸಂಗಪ್ಪ ಎಂ. ಮಾತನಾಡಿದರು.
ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸಕ್ಕರೆ ಕಾರ್ಖಾನೆ ಮಾಲಿಕರ, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಸಂಗಪ್ಪ ಎಂ. ಮಾತನಾಡಿದರು.
Published on
ಬಾಗಲಕೋಟೆ: ಕಳೆದ ೨೦೨೫-೨೬ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಶೇ.೯೭ ರಷ್ಟು ಬಿಲ್ ಪಾವತಿ ಮಾಡಿದ್ದು, ಬಾಕಿ ಬಿಲ್ಲನ್ನು ವಾರದಲ್ಲಿ ಪಾವತಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಕಾರ್ಖಾನೆಗಳಿಗೆ ಗಡುವು ನೀಡಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸಕ್ಕರೆ ಕಾರ್ಖಾನೆ ಮಾಲಿಕರ, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಘೋಷಿಸಿದ ಎಫ್.ಆರ್.ಪಿ ದರದಂತೆ ಹಾಗೂ ಸರ್ಕಾರದ ಆದೇಶದಂತೆ ಮೊದಲ ಕಂತಿನಲ್ಲಿ ಶೇ.೯೭ ರಷ್ಟು ಬಿಲ್ ಪಾವತಿ ಮಾಡಿದ್ದು, ಬಾಕಿ ಪಾವತಿಗೆ ಸಂಬAಽಸಿದAತೆ, ವಾರದಲ್ಲಿ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಯುಕ್ತರು, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರ ಆದೇಶದಂತೆ ೨೦೨೫-೨೬ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಹೆಚ್ಚುವರಿಯಾಗಿ ಘೋಷಿಸಿದ ಪ್ರತಿ ಮೆಟ್ರಿಕ್ ಟನ್‌ಗೆ ೫೦ ರೂ.ಗಳಂತೆ ಒಟ್ಟು ೮೩.೫೪ ಕೋಟಿ ರೂ.ಗಳ ಪೈಕಿ ಈಗಾಗಲೇ ಮೊದಲ ಕಂತಾಗಿ ೬೯.೬೦ ಕೋಟಿರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೇ ಎರಡನೇ ಕಂತು ೧೩.೯೪ ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಎರಡು ದಿನಗಳಲ್ಲಿ ಕಾರ್ಖಾನೆಗಳಿಗೆ ಜಮೆ ಆಗಲಿದೆ. ಕಾರ್ಖಾನೆಗಳು ಸಹ ಹೆಚ್ಚುವರಿ ಪ್ರತಿ ಮೆಟ್ರಿಕ್ ಟನ್‌ಗೆ ನೀಡಬೇಕಾದ ೫೦ ರೂ.ಗಳನ್ನು ಸೇರಿಸಿ, ಪ್ರತಿ ಮೆಟ್ರಿಕ್ ಟನ್‌ಗೆ ೧೦೦ ರೂ.ಗಳನ್ನು ರೈತರಿಗೆ ಜಮೆ ಮಾಡತಕ್ಕದ್ದೆ ಎಂದು ಜಿಲ್ಲಾಽಕಾರಿಗಳು ತಿಳಿಸಿದರು.
ಈಗಾಗಲೇ ಹೆಚ್ಚುವರಿಯಾಗಿ ಸರ್ಕಾರ ಘೋಷಿಸಿದ ಪ್ರಟಿ ಮೆಟ್ರಿಕ್ ಟನ್‌ಗೆ ೫೦ ರೂ. ಹಾಗೂ ಕಾರ್ಖಾನೆಗಳ ಪಾಲಿನ ೫೦ ರೂ. ಸೇರಿ ಒಟ್ಟು ೧೦೦ ರೂ.ಗಳಂತೆ ನಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ಹಾಗೂ ಮುಧೋಳ ತಾಲೂಕಿನ ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಿಟೆಡ್‌ನವರು ಪಾವತಿ ಮಾಡಿರುತ್ತಾರೆ. ಉಳಿದ ಕಾರ್ಖಾನೆಗಳು ತುರ್ತಾಗಿ ರೈತರಿಗೆ ಪಾವತಿ ಮಾಡಿ ಉಪಯೋಗತಾ ಪ್ರಮಾಣ ಪತ್ರ (ಯುಸಿ) ವನ್ನು ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಕಬ್ಬು ಪೂರೈಸಿದ ರೈತರಿಗೆ ನಗದಿತ ಅವಧಿಯೊಳಗೆ ಬಿಲ್ ಪಾವತಿಯಾಗಬೇಕು. ಪಾವತಿಗೆ ವಿಳಂಬ ದೋರಣೆ ಅನುಸರಿಯುವಂತಿಲ್ಲ. ರೈತರ ಹಿತದೃಷ್ಠಿಯಿಂದ ಕಬ್ಬಿನ ಬಿಲ್ ಪಾವತಿ ವಿಚಾರವನ್ನು ಜಿಲ್ಲಾಡಳಿತ ಗಂಭಿರವಾಗಿ ಪರಿಗಣಿಸಿದೆ. ಆದ್ದರಿಂದ ಜಿಲ್ಲಾಽಕಾರಿಗಳು ನೀಡಿದ ಗಡುವಿನೊಳಗಾಗಿ ಬಿಲ್ ಪಾವತಿಗೆ ಕ್ರಮವಹಿಸಲು ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಮನೋಹರ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಿಲ್ಲಾ ಪರಿಸರ ಮಾಲಿನ್ಯ ಅಽಕಾರಿ ಅನೀಲಕುಮಾರ ಚಳಗೇರಿ ಸೇರಿದಂತೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲಿಕರು, ವ್ಯವಸ್ಥಾಪಕರ ನಿರ್ದೇಶಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net