ಐಸಿಸ್,ಅಲ್-ಹಿಂದ್ ಪ್ರಕರಣದ ಉಗ್ರನಿಗೆ 7ವರ್ಷ ಕಠಿಣ

isis-al-hind-case
isis-al-hind-case
Published on

ಪ್ರಮುಖ ಮುಖ್ಯಾಂಶಗಳು

  • ಕಾರಾಗೃಹ ಶಿಕ್ಷೆ, 48 ಸಾವಿರ ದಂಡ ವಿಧಿಸಿದ ಕೋರ್ಟ್
ಬೆಂಗಳೂರು: ನಿಷೇಧಿತ ಐಸಿಸ್, ಅಲ್-ಹಿಂದ್ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ ್ದ ಸೈಯದ್ ಫಾಸಿಯುರ್ ರೆಹಮಾನ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 48 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
2020ರ ಜನವರಿ 10ರಂದು ಬೆಂಗಳೂರಿನಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದರು. ನಂತರ 2020ರ ಜನವರಿ 23ರಂದು ಎನ್‌ಐಎ ಈ ಪ್ರಕರಣವನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು.
ಕೋಮು ಗಲಭೆ ಸಂಚು ಬೆಳಕಿಗೆ
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿರುವ ತನ್ನ ಮನೆಯಲ್ಲಿ ಹಲವು ರಹಸ್ಯ ಸಭೆಗಳನ್ನು ನಡೆಸಿದ್ದ ಉಗ್ರ ಸೈಯದ್ ರಾಜ್ಯ ಸೇರಿ ದೇಶದ ವಿವಿಧ ಕಡೆ ಹತ್ಯೆಗಳಂತ ಕೃತ್ಯ ನಡೆಸಿ ಕೋಮು ಗಲಭೆ ಸೃಷ್ಟಿಸುವ ಮೂಲಕ ನಿಷೇಧಿತ ಐಸಿಸ್ ಸಂಘಟನೆಯ ರಾಷ್ಟ್ರವಿರೋಧಿ ಉದ್ದೇಶಗಳನ್ನು ಮುಂದುವರಿಸಲು ಸಭೆಯಲ್ಲಿ ಚರ್ಚಿಸಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ಅಲ್-ಹಿಂದ್ ಭಯೋತ್ಪಾದಕರ ಗುಂಪಿನ ಸದಸ್ಯರಿಗೆ ಕಾಡಿನಲ್ಲಿ ತರಬೇತಿ ನೀಡಲು ಡೆಕಾಥ್ಲಾನ್ ಕ್ರೀಡಾ ಮಳಿಗೆಯಿಂದ ಟೆಂಟ್ ಮತ್ತು ಮಾರಕಾಸಗಳನ್ನು ಖರೀದಿಸಿದ್ದ. ಐಸಿಸ್-ದಾಯೇಶ್‌ನ ವಿಲಾಯತ್ (ಪ್ರಾಂತ್ಯ) ಸ್ಥಾಪನೆ ಮಾಡುವುದು ಈ ಸಂಚಿನ ಮುಖ್ಯ ಉದ್ದೇಶವಾಗಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಇದುವರೆಗೆ ಈ ಪ್ರಕರಣದಲ್ಲಿ ಒಟ್ಟು 20 ಶಂಕಿತ ಉಗ್ರರರನ್ನು ಬಂಧಿಸಿತ್ತು. ಆ ಪೈಕಿ ಮೂವರ ವಿರುದ್ಧ ದೋಷಾರೋಪ ಪಟ್ಟಿ ಎನ್‌ಐಎ ಸಲ್ಲಿಸಿದೆ. ಆ ಪೈಕಿ ಮತ್ತೊಬ್ಬ ಆರೋಪಿ ಹನೀಫ್ ಖಾನ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪರಿಣಾಮ 2026ರ ಜುಲೈ 14ರಂದು ಶಿಕ್ಷೆಗೆ ಗುರಿಯಾಗಿದ್ದ. ಈಗ ಇದೇ ಪ್ರರಕಣದ ಪ್ರಮುಖ ಆರೋಪಿಯನ್ನು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ವಿದೇಶಿ ಹ್ಯಾಂಡ್ಲರ್ ಪತ್ತೆಗೆ ತನಿಖೆ
ಪ್ರಕರಣದ ತನಿಖೆ ಮುಂದುವರೆಸಿರುವ ತನಿಖಾ ತಂಡ ರಾಜ್ಯದಲ್ಲಿ ಉಗ್ರ ಘಟಕ ಸ್ಥಾಪನೆಗೆ ಆನ್‌ಲೈನ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದ ಹಾಗೂ ಸಂಚು ರೂಪಿಸಿದ್ದ ವಿದೇಶಿ ಹ್ಯಾಂಡ್ಲರ್‌ನ ಪತ್ತೆಗೆ ಎನ್‌ಐಎ ತನಿಖೆ ಮುಂದುವರೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net