

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಗಾಂಧಿನಗರದಸಪ್ನ ಬುಕ್ ಹೌಸ್‌ನಲ್ಲಿ 80ನೇಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತಶನಿವಾರ ಕನ್ನಡದ 6ಪುಸ್ತಕಗಳನ್ನುಬಿಡುಗಡೆ ಮಾಡಲಾಯಿತು.
ಈ ವೇಳೆಮಾತನಾಡಿದ ಕನ್ನಡಪರ ಹೋರಾಟಗಾರಹಾಗೂ ಲೇಖಕ ರಾ.ನಂ.ಚಂದ್ರಶೇಖರ್,ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಸಪ್ನ ಬುಕ್ಹೌಸ್ ಕನ್ನಡ ಪುಸ್ತಕಗಳ ಬಿಡುಗಡೆಮಾಡುವ ದಿನಾಚರಣೆ ಮಾಡುತ್ತಿದೆ.ಇದು ಕನ್ನಡಪ್ರಕಾಶನ ಕ್ಷೇತ್ರಕ್ಕೆ ಬಹುದೊಡ್ಡಕೊಡುಗೆ. ಕರ್ನಾಟಕಸರ್ಕಾರ ಉತ್ತಮ ಸಮಾಜ ನಿರ್ಮಾಣಕ್ಕೆಕಾರಣವಾಗುವ ಪುಸ್ತಕಗಳನ್ನು ಕಳೆದಮೂರು ವರ್ಷಗಳಿಂದ ಖರೀದಿ ಮಾಡುತ್ತಿಲ್ಲ.ಕನ್ನಡಿಗರಿಗೆಉದ್ಯೋಗ, ಶಿಕ್ಷಣ,ಜ್ಞಾನ ಭಾಗ್ಯವನ್ನುಕೂಡ ಸಾರ್ವಜನಿಕರಿಗೆ ಸರ್ಕಾರಕೊಡಬೇಕು. ಕನ್ನಡದವಾತವರಣ ನಿರ್ಮಾಣ ಮಾಡಬೇಕು.ಎಲ್ಲ ಕ್ಷೇತ್ರಗಳಲ್ಲಿಕನ್ನಡಿಗರಿಗೆ ಅವಕಾಶ ಸಿಗಬೇಕುಎಂದು ಹೇಳಿದರು.
ಸಪ್ನಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕನಿತಿನ್ ಷಾ ಮಾತನಾಡಿ, ಸಪ್ನ ಬುಕ್ ಹೌಸ್ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವಸೇವೆ ಸಲ್ಲಿಸುತ್ತಿದೆ.6 ಪುಸ್ತಕಗಳುಇಂದು ಲೋಕರ್ಪಣೆಗೊಂಡಿವೆ.ಕನ್ನಡ ಪುಸ್ತಕಗಳುಅಮೂಲ್ಯರತ್ನಗಳಿದ್ದಂತೆ,ಓದಿದಷ್ಟು ಜ್ಞಾನವಿಕಾಸವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಮೊದಲಿಗೆ ಎಲ್ಲ ಗಣ್ಯರುಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿರಾಷ್ಟ್ರಪಿತ ಮಹಾತ್ಮ ಗಾಂಧೀಜಿಭಾವಚಿತ್ರ ಹಾಗೂ ಪುಸ್ತಕಗಳಿಗೆಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಶಶಿಧರ್ ಹಾಲಾಡಿ,ಹಾಸ್ಯಕವಿಎಂ.ಎಸ್.ನರಸಿಂಹಮೂರ್ತಿ,ಕರ್ನಾಟಕ ವಿಕಾಸರಂಗದವ.ಚ.ಚನ್ನೇಗೌಡಮತ್ತಿತರರು ಪಾಲ್ಗೊಂಡಿದ್ದರು.
ಓದುಗರು ತುಂಬಾ ಜಾಣರಾಗಿದ್ದು, ಲೇಖಕರ ಹೆಸರು ನೋಡಿ ಪುಸ್ತಕ ತೆಗೆದುಕೊಳ್ಳುತ್ತಾರೆ. ಯುವ ಸಾಹಿತಿಯ ಮೊದಲ ಪುಸ್ತಕ ಪ್ರಕಟನೆಗೊಂಡರೆ ಬಹಳ ಋಷಿಯಾಗುತ್ತಾರೆ. ಪುಸ್ತಕಗಳನ್ನು ಸರ್ಕಾರ ಖರೀದಿಸಿ ಲೇಖಕರು, ಮುದ್ರಕರಿಗೆ ಪ್ರೋತ್ಸಾಹ ನೀಡಬೇಕು.
— ಎಚ್.ದುಂಡಿರಾಜ್, ಕವಿ