ದಶಕಗಳ ಹಿಂದೆ ಅಭಿವೃದ್ಧಿಪಡಿಸಲಾದ ಆಶ್ರಯ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿವ ನೀರಿನ ಕೊಳವೆ, ಬೀದಿ ದೀಪಗಳಂತಹ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಆಶ್ರಯ ನಿವೇಶನಗಳ ಮೇಲೆ ಗರಿಷ್ಠ ಶೇ.10 ಶುಲ್ಕು ವಿಧಿಸಿ, ಆ ಹಣವನ್ನು ಬಡಾವಣೆಗಳಿಗಾಗಿ ಬಳಸಿಕೊಳ್ಳುವ ಅವಕಾಶವಿದೆ ಎಂದು ಪೌರಾಯುಕ್ತ ಉಮೇಶ ಚವ್ಹಾಣ್ ಪ್ರಸ್ತಾಪಿಸಿದರು.