ಡಿಸಿಸಿ ಬ್ಯಾಂಕ್​ನಲ್ಲಿ 4.33 ಕೋಟಿ ರೂ. ದುರುಪಯೋಗ? Bank

ಡಿಸಿಸಿ ಬ್ಯಾಂಕ್​ ಶಾಖೆ Bank
ಡಿಸಿಸಿ ಬ್ಯಾಂಕ್​ ಶಾಖೆ Bank
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್​ ಶಾಖೆಯಲ್ಲಿ ಬಂಗಾರಪೇಟೆಯ ಸೊಸೈಟಿಗಳಲ್ಲಿ ಅವ್ಯವಹಾರ
  • ಅಧಿಕಾರಿಗಳ ವಿರುದ್ಧ ದೂರು
ಬಂಗಾರಪೇಟೆ; ಬಂಗಾರಪೇಟೆ ಡಿಸಿಸಿ ಬ್ಯಾಂಕ್​ ಶಾಖೆ ವ್ಯಾಪ್ತಿಯ ಕೆಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳಲ್ಲಿ ಬೆಳೆ ಸಾಲ ವಿತರಣೆಯಲ್ಲಿ 4.33 ಕೋಟಿ ರೂ. ದುರುಪಯೋಗವಾಗಿರುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಡಿಸಿಸಿ ಬ್ಯಾಂಕ್​ ಶಾಖೆ ವ್ಯಾಪ್ತಿಯ 5 ಸೊಸೈಟಿಗಳಲ್ಲಿ ರೈತರಿಗೆ ಬೆಳೆ (ಕೆಸಿಸಿ) Bank ಸಾಲದ ಹೆಸರಿನಲ್ಲಿ 4.33 ಕೋಟಿ ರೂ. ದುರುಪಯೋಗ ನಡೆದಿದ್ದು, ಇದರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಬ್ಯಾಂಕಿನ ಆಡಳಿತಾಧಿಕಾರಿ ಆದಿತ್ಯ ಬಿಸ್ವಾಸ್​ಗೆ ದೂರು ಸಲ್ಲಿಸಿದ್ದಾರೆ.
ಏನಿದು ಆರೋಪ?
2025ರ ನ.6ರಂದು ಕೆಸಿಸಿ ಬೆಳೆ ಸಾಲದ ನವೀಕರಣ ಮಾಡಲು ಆಡಳಿತಾಧಿಕಾರಿ ಆದೇಶವಿಲ್ಲದೆ ಬ್ಯಾಂಕಿನ, ನಬಾರ್ಡ್​, ಆರ್​ಬಿಐನ ನಿಯಮ ಉಲ್ಲಂಘನೆ ಮಾಡಿದ್ದಾರೆ. 4.36 ಕೋಟಿ ರೂ.ಗಳನ್ನು ಕರೆಂಟ್​ ಅಕೌಂಟ್​ಗೆ ಜಮೆ ಮಾಡಿದ್ದಾರೆ. ಮತ್ತೆ ಅದೇ ದಿನ ಸೊಸೈಟಿಯ ಕರೆಂಟ್​ ಅಕೌಂಟ್​ನ ಚೆಕ್​ನ ಮೂಲಕ ಹಣ ಡ್ರಾ ಮಾಡಿದ್ದಾರೆ. ಬೆಳೆ ಸಾಲದ ನಿಯಮಾವಳಿ ಪ್ರಕಾರ ಈ ಹಣ ರೈತರ ಖಾತೆಗೆ ಜಮೆ ಮಾಡಬೇಕಿತ್ತು. ರೈತರ ಖಾತೆಯಿಂದ ಎಟಿಎಂ ಮೂಲಕ ಡ್ರಾ ಮಾಡಬೇಕು.ಆದರೆ, ಕರೆಂಟ್​ ಅಕೌಂಟ್​ನ ಒಂದೇ ಚೆಕ್​ ಮೂಲಕ 4.36 ಕೋಟಿ ಡ್ರಾ ಮಾಡಿದ್ದಾರೆ. ದೊಡ್ಡ ಮೊತ್ತದ ಹಣ ಡ್ರಾ ಮಾಡಿರುವುದರಿಂದ 9.51 ಲಕ್ಷ ರೂ. ಟಿಡಿಎಸ್​ ಕಡಿತವಾಗಿದೆ. ಇದರಿಂದ ಸೊಸೈಟಿಗಳಿಗೆ ನಷ್ಟ ಉಂಟಾಗಿ ಸರ್ವಾಜನಿಕರ ಹಣ ದುರುಪಯೋಗವಾಗಿದೆ ಎನ್ನಲಾಗಿದೆ.
ಅಧಿಕಾರಿಗಳೇ ನೇರ ಹೊಣೆ
ಅವ್ಯವಹಾರ ಕುರಿತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್​ ಹಾಗೂ ಬ್ಯಾಂಕಿನ ಅಕೌಂಟ್​ ವಿಭಾಗ, ಸಾಲ ವಿಭಾಗದ ಎಜಿಎಂ ಶಿವಕುಮಾರ ಹಾಗೂ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಬ್ಯಾಂಕಿನ ಆಡಳಿತಾಧಿಕಾರಿ ಆದಿತ್ಯ ಅಮ್ಲಾನ್​ ಬಿಸ್ವಾಸ್​ ನೇರ ಹೊಣೆ ಆಗಿದ್ದಾರೆ ಎಂದು ದೂರಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ
ಬ್ಯಾಂಕಿನ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿಯೂ ಹಗರಣವೊಂದರಲ್ಲಿ ಭಾಗಿಯಾಗಿರುವುದು ಮೇಲ್ನೊಟಕ್ಕೆ ಸಾಬೀತಾಗಿದ್ದು, ಶಿಸ್ತು ಕ್ರಮ ಜರುಗಿಸಿಲ್ಲ. ರೈತರ ಹೆಸರಿನಲ್ಲಿ ಬೆಳೆಸಾಲ 4.33 ಕೋಟಿ ಹಣ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರೈತ ಸಂದ ಕಾರ್ಯಾಧ್ಯಕ್ಷ ಶಿವಪ್ಪ ಒತ್ತಾಯಿಸಿದ್ದಾರೆ. ಅವ್ಯವಹಾರ ಹಾಗೂ ದುರುಪಯೋಗ ಬಗ್ಗೆ ಸಮಗ್ರ ತನಿಖೆ ಮಾಡಿ ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಜಿಲ್ಲಾ ಕೇಂದ್ರ ಕಚೇರಿ ಮುಂದೆ ರೈತರನ್ನು ಸಂಘಟಿಸಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೊಸೈಟಿಗಳ್ಯಾವುವು?
ಡಿಸಿಸಿ ಬ್ಯಾಂಕ್​ ಬಂಗಾರಪೇಟೆ ಶಾಖೆ ವ್ಯಾಪ್ತಿಯ ಚಿಕ್ಕಅಂಕಡಹಳ್ಳಿ ವಿಎಸ್​ಎಸ್​ಎನ್​ <59.50 ಲಕ್ಷ, ಖಾತೆ ಸಂಖ್ಯೆ 125004536260, ಕಾರಮಂಗಲ <60.88 ಲಕ್ಷ ಖಾತೆ ಸಂಖ್ಯೆ125004657854, ಬೋಡಗುರ್ಕಿ <45.81 ಲಕ್ಷ, ಖಾತೆ ಸಂಖ್ಯೆ 125003691091, ಬಂಗಾರಪೇಟೆ ಕಸಬಾ <81.96 ಲಕ್ಷ, ಖಾತೆ ಸಂಖ್ಯೆ 125002778972, ತೋಪ್ಪನಹಳ್ಳಿ <96.55 ಲಕ್ಷ, ಖಾತೆ ಸಂಖ್ಯೆ 125002788845 ಸೇರಿ ಒಟ್ಟು <4.33 ಕೋಟಿ ಜಮೆಯಾಗಿ ಖಾತೆ ರದ್ದು ಮಾಡಿರುವ ಕೆಲಸ ಆಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net