1.75 ಕೋಟಿ ರೂ. ವೆಚ್ಚದಲ್ಲಿ 37 ಕೊಳವೆ ಬಾಯಿ

37 manholes at a cost of Rs. 1.75 crore
37 manholes at a cost of Rs. 1.75 crore
Published on
ಕೋಲಾರ: ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಕ್ಷೇತ್ರದಲ್ಲಿ ಒಟ್ಟು 37 ಕೊಳವೆಬಾವಿ ಕೊರೆಯಿಸಲಾಗುತ್ತಿದ್ದು, ಒಟ್ಟು1.75 ಕೋಟಿ ರೂ. ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಬಡರೈತರಿಗೆ, ಅಲೆಮಾರಿಗಳು ಸೇರಿ ವಿವಿಧ ಸಮುದಾಯಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್​ ತಿಳಿಸಿದರು.
ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿಮಂಗಳವಾರ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದರು.
ಕಳೆದ ಬಾರಿ ಗುತ್ತಿಗೆದಾರರು 6 ತಿಂಗಳಲ್ಲಿ ಮುಗಿಯಬಹುದಾದ ಕೆಲಸವನ್ನು ವರ್ಷಾನುಗಟ್ಟಲೆ ಮಾಡಿದರು. ಈ ಬಾರಿ ಸರಿಯಾಗಿ ಕೆಲಸ ಮಾಡಬೇಕು. ಕಾಮಗಾರಿ ನಡೆಯುವಾಗ ರೈತರು ಮುಂದೆ ನಿಂತು ಎಷ್ಟು ಅಡಿ ಕೊರೆದಿದ್ದಾರೆ, ಎಷ್ಟು ಪೈಪ್​ ಹಾಕಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು. ಆ ಮಾಹಿತಿ ನಮಗೆ ಕೊಡಬೇಕು. ಆ ನಂತರವಷ್ಟೇ ಗುತ್ತಿಗೆದಾರರಿಗೆ ಬಿಲ್​ ಮಾಡಲಾಗುತ್ತದೆ. ಜತೆಗೆ ಕೊಳವೆ ಬಾವಿ ಕೊರೆಸಿ ಮೋಟರ್​ ಪಂಪು ಕೊಡದೆ ಮತ್ತೊಂದು ಕಡೆ ಬೋರ್​ವೆಲ್​ ಕೊರೆಸಲು ಹೋಗಬಾರದು ಎಂದು ತಿಳಿಸಿದರು.
ಎಂಎಲ್ಸಿ ಎಂ.ಎಲ್​ ಅನಿಲ್​ ಕುಮಾರ್​, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಕೆಂದಟ್ಟಿ ಶಿವಕುಮಾರ್​, ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸೂಲೂರು ಗ್ರಾಪಂ ಮಾಜಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್​, ಮುಖಂಡರಾದ ವೀರಭದ್ರಯ್ಯ, ರವಿಕುಮಾರ್​, ಸಿದ್ದಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net