ಬೆಂಗಳೂರಿನ ಎರಡು ಕಡೆ ನಡೆದ ದಾಳಿ ಗುರುವಾರ ಸಂಜೆ 6.30ಕ್ಕೆ ಮುಕ್ತಾಯಗೊಳಿಸಿದ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದುವರೆಗೆ ನಡೆದ ತಪಾಸಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಸಂಸದೆ ಪ್ರಿಯಾಂಕ್ ಜಾರಕಿಹೊಳಿ ಅವರಿದ್ದ ಗೋಕಾಕ್ ನಿವಾಸದಲ್ಲಿ 1.2 ಕೋಟಿ ರೂ. ಬೆಂಗಳೂರಿನ ಡಾಲರ್ಸ್ ಹಾಗೂ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸ ಸೇರಿ ಒಟ್ಟು 3 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ಜಾರಕಿಹೊಳಿ ಸಹೋದರಿಯ ಪತಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥ್ ಅವರ ಬೆಂಗಳೂರಿನ ನಿವಾಸ, ಬೆಳಗಾವಿ, ಗೋಕಾಕ ಹಾಗೂ ಗೋವಾ, ಮಹಾರಾಷ್ಟ್ರದ ಹಲವು ಕಡೆ ಇಡಿ ಶೋಧಕಾರ್ಯ ಮುಂದುವರೆದಿದೆ.