350 ಚೀಲ ತ್ಯಾಜ್ಯ ಸಂಗ್ರಹಣೆ Cleaning work

Cleaning work ನೆಲಮಂಗಲ ತಾಲೂಕು ದಣ ಕಾಶಿ ಶಿವಗಂಗೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್​ ಜಿ.ಜೆ ಹೇಮಾವತಿ, ಗಂಗಾದೇಶ್ವರ ಹೊನ್ನಾದೇವಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಂ.ಎನ್​.ಬೃಂದಾ ಇದ್ದರು.
Cleaning work ನೆಲಮಂಗಲ ತಾಲೂಕು ದಣ ಕಾಶಿ ಶಿವಗಂಗೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್​ ಜಿ.ಜೆ ಹೇಮಾವತಿ, ಗಂಗಾದೇಶ್ವರ ಹೊನ್ನಾದೇವಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಂ.ಎನ್​.ಬೃಂದಾ ಇದ್ದರು.
Published on
ದಾಬಸ್​ಪೇಟೆ: ಶಿವಗಂಗಾ ೇತ್ರದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದು, Cleaning work ನಿತ್ಯ ಭಕ್ತಾದಿಗಳು ತ್ಯಾಜ್ಯವನ್ನು ಎಲ್ಲಿ ಅಂದರೆ ಅಲ್ಲಿ ಎಸೆದು ಹೋಗುತ್ತಿದ್ದಾರೆ. ಭಕ್ತಾದಿಗಳಿಗೆ ಸೂಚನಾ ಫಲಕ ಹಾಕಿದ್ದರೂ ಕೂಡ ತ್ಯಾಜ್ಯ ಎಸೆದು ಪರಿಸರ ಹಾಳು ಮಾಡುತ್ತಿದ್ದಾರೆ. ಎಲ್ಲಿ ಅಂದರೆ ಅಲ್ಲಿ ತ್ಯಾಜ್ಯ ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.
ನೆಲಮಂಗಲ ತಾಲೂಕು ದಣ ಕಾಶಿ ಶಿವಗಂಗೆಯಲ್ಲಿ ಸಿಎಫ್​ಎಲ್​ ಸಿಬ್ಬಂದಿ, ಮಹಾವೀರ್​ ಜೈನ್​ ಕಾಲೇಜ್​, ೇತ್ರ ಶಿಣ ಇಲಾಖೆ ಸಿಬ್ಬಂದಿ, ಅಗ್ರಿಕಲ್ಚರ್​ ಸಿಬ್ಬಂದಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ, ರೇಷ್ಮೆ ಇಲಾಖೆ ಸಿಬ್ಬಂದಿ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿಯಿಂದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು.
ನೆಲಮಂಗಲ ತಾಲೂಕು ದಂಡಾಧಿಕಾರಿ ಮಲ್ಲಪ್ಪ ಬೀರಪ್ಪ ಪೂಜಾರಿ ಮಾತನಾಡಿ, ಶಿವಗಂಗೆ ಬೆಟ್ಟಕ್ಕೆ ಬರುವ ಭಕ್ತಾದಿಗಳು ನೀರಿನ ಬಾಟಲ್​ ಪ್ಲಾಸ್ಟಿಕ್​ ತಟ್ಟೆಗಳು, ಪ್ಲಾಸ್ಟಿಕ್​ ಲೋಟಗಳು, ಪ್ಲಾಸ್ಟಿಕ್​ ಪೇಪರ್​ ತರುವುದನ್ನು ನಿಷೇಧ ಮಾಡಲಾಗುತ್ತದೆ. ನೀವು ಅಂಗಡಿ ಮಾಲೀಕನಿಂದ ಖರೀದಿ ಮಾಡಿದ ಯಾವುದೇ ಪ್ಲಾಸ್ಟಿಕ್​ ಮತ್ತೆ ಅಂಗಡಿ ಮಾಲೀಕನಿಗೆ ಹಿಂದಿರುಗಿಸಬೇಕು ಇಲ್ಲವಾದರೆ ಅಂಗಡಿ ಮಾಲೀಕನಿಗೂ ಭಕ್ತಾದಿಗಳು ದಂಡ ವಿಧಿಸಲಾಗುತ್ತದೆ ಎಂದರು.
400ಕ್ಕೂ ಹೆಚ್ಚು ಸಿಬ್ಬಂದಿ ಹಾಜರಾಗಿ 350 ಚೀಲ ತ್ಯಾಜ್ಯ ಸಂಗ್ರಹಿಸಲಾಯಿತು.
ಸೋಂಪುರ ಉಪ ತಹಸೀಲ್ದಾರ್​ ಶಶಿಧರ್​, ರಾಜಸ್ವ ನಿರೀಕ ಸುಂದರ್​ ರಾಜು, ಮುನಿರಾಜು ಕಸಬಾ ರಾಜಸ್ವ ನಿರೀಕ ಚಂದ್ರಶೇಖರ್​ ಶಿವಪ್ರಸಾದ್​, ಮಹೇಶ್​ ಕುಮಾರ್​, ಗ್ರಾಮ ಲೆಕ್ಕಿಗ ಬಾಲಕೃಷ್ಣ, ಗೋಪಾಲ್​, ನವೀನ್​, ಕಿರಣ್​, ಪ್ರಕಾಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net