ಅರಮನೆ ಮೈದಾನದಲ್ಲಿ 31ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಚಾಲನೆ

31ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಬಿ.ಸಿ. ಶಿವಕುಮಾರ್ ಚಾಲನೆ ನೀಡಿದರು. ಸಿಗಾ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಜವಳಿ ಕ್ಷೇತ್ರದ ಗಣ್ಯರಾದ ನವೀನ್ ಸಿನ್ಹಾ, ವಿಜಯ್ ಪುರೋಹಿತ್, ದಿನೇಶ್ ಜ್ಹಲಾನಿ ಮತ್ತಿತರರು ಉಪಸ್ಥಿತರಿದ್ದರು.
31ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಬಿ.ಸಿ. ಶಿವಕುಮಾರ್ ಚಾಲನೆ ನೀಡಿದರು. ಸಿಗಾ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಜವಳಿ ಕ್ಷೇತ್ರದ ಗಣ್ಯರಾದ ನವೀನ್ ಸಿನ್ಹಾ, ವಿಜಯ್ ಪುರೋಹಿತ್, ದಿನೇಶ್ ಜ್ಹಲಾನಿ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಮನೆ ಮೈದಾನದಲ್ಲಿ 31ನೇ ಸಿಗಾ ಗಾರ್ಮೆಂಟ್ಸ್ ಮೇಳಕ್ಕೆ ಚಾಲನೆ
  • ಮೂರು ದಿನ ನಡೆಯಲಿರುವ ರಾಷ್ಟ್ರಮಟ್ಟದ ಮೇಳ
  • ರಾಜ್ಯದ 30ಕ್ಕೂ ಹೆಚ್ಚು ಸೇರಿದಂತೆ 90ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಭಾಗಿ

ಬೆಂಗಳೂರು: ಅರಮನೆಮೈದಾನದ ಫ್ರಿನ್ಸ್ ಶ್ರೈನ್ಸಭಾಂಗಣದಲ್ಲಿ ಮೂರು ದಿನಗಳ ದೇಶದಅತಿದೊಡ್ಡ 31 ನೇಸಿಗಾ ಗಾರ್ಮೆಂಟ್ಸ್ ಮೇಳಕ್ಕೆಚಾಲನೆ ದೊರೆತಿದೆ.ರಾಜ್ಯದ 35ಬ್ರ್ಯಾಂಡ್ಸೇರಿ 90ಕ್ಕೂಅಧಿಕ ಬ್ರ್ಯಾಂಡ್‌ಗಳು ಮೇಳದಲ್ಲಿಪಾಲ್ಗೊಂಡಿವೆ.

ರಾಜ್ಯದಬೃಹತ್ ರಿಟೈಲ್ ವ್ಯಾಪಾರಸಂಸ್ಥೆಯಾಗಿರುವ ಬಿ.ಎಸ್.ಚೆನ್ನಬಸಪ್ಪಅಂಡ್ ಸನ್ಸ್ ಸಂಸ್ಥೆಯ ಮಾಲೀಕರಾದಬಿ.ಸಿ.ಶಿವಕುಮಾರ್ಮೇಳಕ್ಕೆ ಚಾಲನೆ ನೀಡಿದರು.

ಮಹಿಳೆಯರವೈವಿಧ್ಯಮಯ ಉಡುಪುಗಳು,ಹಬ್ಬ,ಮದುವೆಯ ವಸ್ತ್ರವಿನ್ಯಾಸಗಳ ಪ್ರದರ್ಶನ ಇದಾಗಿದೆ.ಸೌತ್ ಇಂಡಿಯಾಗಾರ್ಮೆಂಟ್ಸ್ ಅಸೋಸಿಯೇಷನ್(ಸಿಗಾ)ಇದೇ ಮೊದಲ ಬಾರಿಗೆಮೇಳದಲ್ಲಿ ಮಹಿಳೆಯರ ವಸ್ತ್ರಗಳಿಗೆವಿಶೇಷ ಆದ್ಯತ ನೀಡಿದೆ.ಮಂಗಳವಾರ ಆರಂಭವಾದಮೇಳ ಗುರುವಾರದವರೆಗೆ 3ದಿನ ನಡೆಯಲಿದೆ.

ಸಮಾರಂಭಉದ್ಘಾಟಿಸಿ ಮಾತನಾಡಿದ ಬಿ.ಸಿ.ಶಿವಕುಮಾರ್,ಇಂತಹ ಮೇಳಗಳುರಿಟೈಲ್ ವ್ಯಾಪಾರಿಗಳಿಗೆಹಬ್ಬವಿದ್ದಂತೆ.ಒಂದೇ ವೇದಿಕೆಯಲ್ಲಿನೂರಾರು ಬ್ರ್ಯಾಂಡ್‌ಗಳ ನೂತನವಿನ್ಯಾಸದ ಬಟ್ಟೆಗಳನ್ನು ನೋಡಬಹುದು.ಹಾಗೂ ನಮ್ಮಗ್ರಾಹಕರಿಗೆ ಅಗತ್ಯವಾಗಿರುವಬ್ರ್ಯಾಂಡ್‌ಗಳನ್ನು ಖರೀದಿಮಾಡಬಹುದು. ಬಟ್ಟೆಉತ್ಪಾದಕರು ಕೂಡಾ ಮಾರ್ಕೆಟಿಂಗ್‌ಗಾಗಿಓಡಾಡುವುದರ ಬದಲು ಒಂದೇ ಕಡೆ ತಮ್ಮಉತ್ಪನ್ನದ ವಿಶೇಷತೆಯನ್ನುವ್ಯಾಪಾರಿಗಳಿಗೆ ಮನವರಿಕೆಮಾಡಿಕೊಡಬಹುದು.ಹಾಗಾಗಿ ಹೋಲ್‌ಸೆಲ್ಮತ್ತು ರಿಟೈಲ್ ವ್ಯಾಪಾರಿಗಳಿಬ್ಬರಿಗೂಮೇಳ ಉಪಯುಕ್ತ ಎಂದರು.

ಸಿಗಾಅಧ್ಯಕ್ಷ ಅನುರಾಗ್ ಸಿಂಗ್ಲಾ,ಸಿಎಂಎಐ ಸಂಘನೆಯಕಾರ್ಯದರ್ಶಿ ನವೀನ್ ಸಿನ್ಹಾ,ಜಿಜಿಎಂಎ ಅಧ್ಯಕ್ಷವಿಜಯ್ ಪುರೋಹಿತ್,ಡಿ.ಎಲ್.ವೈಡಿಸೈನಿಂಗ್ ಸ್ಟುಡಿಯೋದ ಸಂಸ್ಥಾಪಕದಿನೇಶ್ ಜ್ಹಲಾನಿ,ನಟಿ ಪ್ರಿಯಾಂಕಅರೋರ ಮತ್ತಿತರರು ಉಪಸ್ಥಿತರಿದ್ದರು.

ಕ್ಯಾಶುಯಲ್, ಫಾರ್ಮಲ್ಸ್, ಚಳಿಗಾಲದ ವಸ್ತ್ರಗಳು, ಪ್ಯಾಷನ್ ವಸ್ತ್ರಗಳು ಈ ಬಾರಿಯ ವಿಶೇಷತೆಯಾಗಿವೆ. ದೆಹಲಿ, ಸೂರತ್, ಮುಂಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬಂದಿದ್ದಾರೆ. ರಾಜ್ಯದ ಜವಳಿ ವ್ಯಾಪಾರಿಗಳಿಗೆ ಇದು ಉಪಯುಕ್ತ ವೇದಿಕೆಯಾಗಿದ್ದು, 4 ಸಾವಿರಕ್ಕೂ ಹೆಚ್ಚು ರಿಟೈಲ್ ವ್ಯಾಪಾರಸ್ಥರು ಭೇಟಿ ನೀಡುವ ನಿರೀಕ್ಷೆ ಇದೆ.

ಕೃತಕ ಬುದ್ದಿಮತ್ತೆ ಸೇರಿದಂತೆ ಅತ್ಯಾಧ್ಯನಿಕ ತಂತ್ರಜ್ಞಾನ ಮತ್ತು ಆನ್‌ಲೈನ್ ಮಾರಾಟದಿಂದ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಆತಂಕವಿದ್ದು, ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಈ ಮೇಳವನ್ನು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net