

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮೂರು ದಿನಗಳಿಂದಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ಆಯೋಜಿಸಿದ್ದ ಉದ್ಯಮಿ ಒಕ್ಕಲಿಗಎಕ್ಸ್‌ಪೋಗೆ ಭಾನುವಾರ ತೆರೆಬಿತ್ತು.ಬೆಳಗ್ಗೆಯಿಂದಲೇಪ್ರದಾನ ವೇದಿಕೆ ಮತ್ತು ಸಮಾನಾಂತರವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳುನಡೆದವು. ಭಾನುವಾರದರಜೆಯ ಕಾರಣಕ್ಕಾಗಿ ಸಮುದಾಯದ ಜನಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡಿದ್ದರು.
ಆಧುನಿಕಕೃಷಿ ಪದ್ಧತಿಯಲ್ಲಿ ಸುಸ್ಥಿರತೆಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿಕೃಷಿ ವಿವಿ ವಿಶ್ರಾಂತ ಕುಲಪತಿಡಾ.ಕೆ.ನಾರಾಯಣಗೌಡ,ಕಾಫಿ ಮಂಡಳಿಅಧ್ಯಕ್ಷ ಎಂ.ಜಿ.ದಿನೇಶ್,ಪ್ರಗತಿಪರ ಕೃಷಿಕಡಾ.ಎಂ.ಸಿ.ರಂಗಸ್ವಾಮಿ,ನಿವೃತ್ತ ಐಎಎಸ್ಅಧಿಕಾರಿ, ರಾಮೇಗೌಡ,ಕೃಷಿ ಇಲಾಖೆಜಂಟಿ ನಿರ್ದೇಶಕ ಅಶೋಕ ಮತ್ತಿತರರುಪಾಲ್ಗೊಂಡು ವಿಷಯ ಮಂಡಿಸಿದರು.
ಗೋಷ್ಠಿಯಲ್ಲಿಪಾಲ್ಗೊಂಡು ಮಾತನಾಡಿದ ಉನ್ನತಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,ಒಕ್ಕಲಿಗರುದೇಶಕ್ಕೆ ಅನ್ನ ಕೊಡುವ ಮಹತ್ವದಕೆಲಸ ಮಾಡುತ್ತಿದ್ದಾರೆ.ಕೋಲಾರ,ಚಿಂತಾಮಣಿಪ್ರದೇಶವು ದೇಶದಲ್ಲೇ ಅತಿ ಹೆಚ್ಚುಟೊಮ್ಯಾಟೋ ಬೆಳೆಯುವ ಪ್ರಾಂತ್ಯ.ಬೇಡಿಕೆ ಕುಸಿತದಿಂದಈ ಭಾಗದ ರೈತರು ಕೆಲವು ಬಾರಿ ಬೆಳೆದಬೆಳೆಯನ್ನು ರಸ್ತೆಗೆ ಸುರಿಯುವಪರಿಸ್ಥಿತಿ ನಿರ್ಮಾಣವಾಗುತ್ತದೆ.ಬೆಳೆಗಾರರ ಸಹಕಾರಸಂಘ ಸ್ಥಾಪಿಸುವುದರಿಂದ ಈಸಮಸ್ಯೆಯ್ನನು ಪರಿಹರಿಸಬಹುದು.ಬೆಲೆ ಕುಸಿತದಸಂದರ್ಭದಲ್ಲಿ ಟೊಮ್ಯಾಟೋದ ಪರ್ಯಾಯಉತ್ಪನ್ನವನ್ನು ತಯಾರಿಸುವ ಮೂಲಕನಷ್ಟವನ್ನು ಸರಿದೂಗಿಸಲು ಸಾಧ್ಯಎಂದರು.
ಪರ್ಯಾಯವೇದಿಕೆಯಲ್ಲಿ ನಡೆದ ವೈದ್ಯಕೀಯಕ್ಷೇತ್ರ ಕುರಿತು ಗೋಷ್ಠಿಗೆಸಂಬಂಧಿಸಿದಂತೆ, ಸಾಮಾನ್ಯ ಜನರುಕೂಡಾ ಸರ್ಕಾರಿ ಆಸ್ಪತ್ರೆ ಬಗ್ಗೆವಿಶ್ವಾಸವಿಟ್ಟು ಬರಬೇಕು.ಆ ನಿಟ್ಟಿನಲ್ಲಿಆಸ್ಪತ್ರೆಗಳ ಅಭಿವೃದ್ದಿ ಅವಶ್ಯವಿದೆ.ಸರ್ಕಾರಿ ಸ್ವಾಮ್ಯದಜಯದೇವ ಆಸ್ಪತ್ರೆ ದೇಶದಲ್ಲೇಅತ್ಯುನ್ನತ ಸೇವೆಯನ್ನುಒದಗಿಸುತ್ತಿದ್ದು,ಅದಕ್ಕೆ ಕಾರಣೀಭೂತರಾದಸಮುದಾಯದವರೇ ಆದ ಡಾ.ಸಿ.ಎನ್.ಮಂಜುನಾಥಅವರ ಸೇವೆಯನ್ನು ಯಾರೂ ಮರೆಯುವಂತಿಲ್ಲಎಂದು ಡಾ.ಎಂ.ಸಿ.ಸುಧಾಕರ್ವಿವರಿಸಿದರು.
ಗೋಷ್ಠಿಯಲ್ಲಿಡಾ.ಪುಣ್ಯವತಿ,ಡಾ.ಕೃಷ್ಣೇಗೌಡ,ಮಹಾರಾಷ್ಟ್ರದಐಎಎಸ್ ಅಧಿಕಾರಿ ಡಾ.ಗೋವಿಂದರಾಜ್,ಡಾ.ಅಂಬುಜಾ,ಆದಾಯ ತೆರಿಗೆಇಲಾಖೆ ಅಧಿಕಾರಿ ನಾಗೇಶ್ ಮತ್ತಿತರರುಮಾತನಾಡಿದರು.ಒಕ್ಕಲಿಗ ಉದ್ಯಮಿಗಳುನಡೆಸುತ್ತಿರುವ ವಿವಿಧ ಶಿಕ್ಷಣಸಂಸ್ಥೆಗಳ ವಿದ್ಯಾರ್ಥಿಗಳು,ಗೋಷ್ಠಿಗಳಲ್ಲಿಪಾಲ್ಗೊಂಡು ತಜ್ಞರು ನೀಡಿದಮಾಹಿತಿಗಳನ್ನು ಪಡೆದುಕೊಂಡರು.
ವಿವಿಧಕ್ಷೇತ್ರಗಳಲ್ಲಿ ಉದ್ಯಮವನ್ನುಸ್ಥಾಪಿಸಿರುವ ಒಕ್ಕಲಿಗ ಸಮುದಾಯದಉದ್ಯಮಿಗಳು ತಮ್ಮ ಉತ್ಪನ್ನಗಳಪ್ರದರ್ಶನ ಮತ್ತು ಮಾರಾಟವನ್ನುಏರ್ಪಡಿಸಿದ್ದರು.ಜನ ಮಳಿಗೆಗಳಿಗೆಬೇಟಿ ನೀಡಿ ತಮಗಿಷ್ಟವಾದ ಪದಾರ್ಥಗಳನ್ನುಖರೀದಿಸಿದರು.ಸೀರೆ,ಬಟ್ಟೆ,ಕರಕುಶಲ ವಸ್ತುಗಳು,ಎಲೆಕ್ಟ್ರಾನಿಕಉಪಕರಣಗಳು, ಕೃಷಿಬಿಡಿ ಉತ್ಪನ್ನಗಳು,ಸಾವಯವ ಆಹಾರಪದಾರ್ಥಗಳು ಸೇರಿದಂತೆ ವಿವಿಧಬಗೆಯ ವಸ್ತುಗಳು ಮೇಳದಲ್ಲಿಸಾರ್ವಜನಿಕರ ಗಮನ ಸೆಳೆದವು.
ಒಕ್ಕಲುತನ ಸ್ವಾಭಿಮಾನದ ಬದುಕಿಗೆ ಶಕ್ತಿ ನೀಡಿ, ಸಮಾಜಕ್ಕೆ ಆಹಾರ, ಆರೋಗ್ಯವನ್ನು ನೀಡುವ ಮಹತ್ವದ ಜವಾಬ್ದಾರಿ. ನಮ್ಮ ಸಮುದಾಯ ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಲವಿದೆ. ಒಕ್ಕಲಿಗ ಉದ್ಯಮಿಗಳು ಸಮಾಜದಲ್ಲಿ ತಮ್ಮ ಬ್ರಾಂಡ್‌ಗಳ ಮೂಲಕ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ತಾವು ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸಬೇಕು.